ನಕಲಿ ದಾಖಲೆಗಳನ್ನ ಸೃಷ್ಟಿಸಿ 11 ಎಕರೆ ಜಮೀನು ನುಂಗಿದ ಭೂಪ..!?

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಿಂಗಲಬಂಡಿ ಗ್ರಾಮದ ಮೌನೇಶ್ವರ ದೇವಸ್ಥಾನದ ಪೂಜಾರಿ ಹಾಗೂ ಗೇಣಿದಾರ ಮಕ್ಕಳ ನಡುವೆ ಭೂ ನ್ಯಾಯ ಮಂಡಳಿಯಲ್ಲಿ ವ್ಯಾಜ್ಯ ಇರುವ 11.14 ಎಕರೆ ಜಮೀನು ಖಾಸಗಿ ವ್ಯಕ್ತಿಯೊಬ್ಬರ ಪಾಲಾಗಿರುವ ಸುದ್ದಿ ಲಿಂಗಲಬಂಡಿ ಗ್ರಾಮ ಸೇರಿದಂತೆ ಜಿಲ್ಲೆಯಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದೆ..!?

ಲಿಂಗಲಬಂಡಿ ಗ್ರಾಮಸ್ಥರು ದೇವಸ್ಥಾನದ ಜಮೀನು ವ್ಯಕ್ತಿವೊಬ್ಬರ ಪಾಲಾಗಿರುವ ಪ್ರಕರಣದ ಕುರಿತು ಹೇಳಿದ್ದಿಷ್ಟು , ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಮೌನೇಶ್ವರ ದೇವಸ್ಥಾನದ ಹೆಸರಿನಲ್ಲಿ (1980 ಇಸ್ವಿ ಹಿಂದೆ ಕಾಗದ ಪತ್ರಗಳ ಪ್ರಕಾರ 100 ಕ್ಕೂ ಅಧಿಕ) ಜಮೀನು ಇತ್ತು. ಈ ಜಮೀನಿನ ಪೈಕಿ 11.14 ಎಕರೆ ಜಮೀನನ್ನು ಪ್ರಭಾವಿ ವ್ಯಕ್ತಿಯೊಬ್ಬರು ತಮ್ಮ ಹೆಸರಿಗೆ ಕ್ರಯದ ಮೂಲಕ ರ್ವಗಾಯಿಸಿಕೊಂಡಿದ್ದಾರೆ. ಖರೀದಿದಾರನು ದೇವಸ್ಥಾನಕ್ಕೆ ಯಾವುದೇ ರೀತಿಯಲ್ಲಿ  ಸಂಬಂಧಪಟ್ಟವರಲ್ಲ. ಆದಾಗ್ಯೂ ವ್ಯಕ್ತಿ ಜಮೀನನ್ನು ತನ್ನ ಹೆಸರಿಗೆ ಖರೀದಿಸಿಕೊಂಡಿದ್ದಾನೆ. ದೇವಸ್ಥಾನದ ಪೂಜೆ ಸೇರಿದಂತೆ ಇತ್ಯಾದಿ ಚಾಕರಿ ಕುರಿತು ಆನೆಗೊಂದಿ ಸಂಸ್ಥಾನದ ಲೇಬಗೆರಿಯ ಶ್ರೀ ಲಕ್ಷ್ಮೇಂದ್ರ ಮಹಾಸ್ವಾಮಿಗಳ ಮಠ ಮತ್ತು ಹೋಳೆಆಲೂರಿನ ಶ್ರೀ ಯಚ್ಚರೇಶ್ವರ ಮಠಗಳ ನಡುವಿನ ವ್ಯಾಜ್ಯ ಸಿವಿಲ್ಲ ನ್ಯಾಯಾಲಯ ಯಲಬುರ್ಗಾದಲ್ಲಿ ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿರುವಾಗ ಒಟ್ಟು ಆಸ್ತಿಯ ಪೈಕಿ 11.14 ಗುಂಟೆ ಜಮೀನು ಹೇಗೆ ಪರಬಾರೆ ಆಗಿತು..!?. 11.14 ಎಕರೆ ಪೈಕಿ ಜಮೀನಿಗೆ 11 E ಸ್ಕೆಚ್ (ಟೊಂಚ್) ಇಲ್ಲದೆ, ಹೇಗೆ ಆಸ್ತಿ ವರ್ಗಾವಣೆ ಆಗಿತು. ದಕ್ಕ ಖರೀದಿ ಕಾಗದ ಪತ್ರ ಬರೆದವರಾರು, ಖರೀದಿ ಪತ್ರಕ್ಕೆ ಸಾಕ್ಷಿ ಸಹಿ ಹಾಕಿದವರಾರು..!? ಒಟ್ಟು ಜಮೀನಿನ ಮೇಲಿರುವ ಪ್ರಕರಣ ನ್ಯಾಯಾಲಯದಲ್ಲಿರುವಾಗ ಪೈಕಿ ಜಮೀನು ಖರೀದಿ ಹೇಗೆ ಸಾಧ್ಯವಾಗಿತು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳು ಲಿಂಗಲಬಂಡಿ ಗ್ರಾಮಸ್ಥರನ್ನು ಕಾಡಲಿತ್ತಿವೆ..!!

” ಪಹಣಿಯಲ್ಲಿರುವ ಕಲಂ ನಂಬರ್ 10 ಮತ್ತು 11 ರಲ್ಲಿರುವ ಗೇಣಿ ಹಾಗೂ 15 ವರ್ಷಗಳ ಪರಭಾರೆ ನಿಷೇದಿಸಿದ ದಾಖಲೆಗಳನ್ನು ಅಳಿಸಿಕೊಂಡು ಖರೀದಿದಾರ ಹಾಗೂ ಖರೀದಿ ನೀಡಿದವರು ಇಲಾಖೆಗೆ ಚೀಟ್ ಮಾಡಿದ್ದಾರೆ”
        
## ಯಾಸೀನ್ ಮುಲ್ಲಾ ಉಪನೋಂದಣಾಧಿಕಾರಿಗಳು, ಯಲಬುರ್ಗಾ.