3 ದಿನ ಶಾಲಾ ಕಾಲೇಜಗಳಿಗೆ ರಜೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ 

ಕೊಪ್ಪಳ : ರಾಜ್ಯದಲ್ಲಿ ಹಿಜಾಬ್ ಕುರಿತು ನಡೆದಿರುವ ಪರ ವಿರೋಧದ ಮುಂಜಾಗ್ರತೆ ಹಿನ್ನೆಲೆಯಲ್ಲಿ ಪ್ರೌಢ ಶಾಲಾ-ಕಾಲೇಜುಗಳು ಸೇರಿದಂತೆ ಪದವಿ ಕಾಲೇಜುಗಳಿಗೆ 3 ದಿನಗಳ ಕಾಲ (ದಿನಾಂಕ 09-02-2022 ರಿಂದ 11-02-2022 ರವರೆಗೆ) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಜೆ ಘೋಷಿಸಿದ್ದಾರೆ..!

ವಿದ್ಯಾರ್ಥಿಗಳು ಸೇರಿದಂತೆ ಪಾಲಕರು, ಶಿಕ್ಷಕರಲ್ಲಿ ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿರುವ ಸಿಎಂ ರಾಜ್ಯದಲ್ಲಿ ಯಾವುದೇ ತರಹದ ಗಲಭೆಗಳಿಗೆ ಅವಕಾಶ ನೀಡಬಾರದು, ಶಾಂತಿ ಕಾಪಾಡಿಕೊಳ್ಳುವಂತೆ ತಿಳಿಸಿದ್ದಾರೆ..!!