4 ಕುರಿಮರಿ ಬಲಿ ಪಡೆದ ಬೀದಿ ನಾಯಿ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಬೀದಿ ನಾಯಿವೊಂದು ನಾಲ್ಕು ಕುರಿಮರಿಗಳನ್ನು ಬಲಿ ಪಡೆದಿರುವ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದಲ್ಲಿ ಜರುಗಿದೆ..!

ಗ್ರಾಮದ ಹೊರವಲಯದಲ್ಲಿ ಹಾಕಿರುವ ಕುರಿ ಹಟ್ಟಿ ಒಳಗಡೆಗೆ ನುಗ್ಗಿದ ಬೀದಿ ನಾಯಿ ಕುರಿಮರಿಗಳ ಮೇಲೆ ಅಟ್ಟಹಾಸ ಮೇರೆದಿದೆ. ನಾಯಿ ದಾಳಿಗೆ ನಾಲ್ಕು ಕುರಿಮರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಇನ್ನೂ ನಾಲ್ಕು ಮರಿಗಳು ತೀವ್ರ ಗಾಯಗೊಂಡಿವೆ. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆ ಮುಂದಾಗಬೇಕಾಗಿದೆ. ಹಾನಿಗೊಳಗಾದ ಕುರಿಮರಿಗಳಿಗೆ ಪರಿಹಾರಕ್ಕಾಗಿ ಕುರಿಗಳ ಮಾಲಿಕ ಪರಸಪ್ಪ ಹಂಡಿ ಹಾಗೂ ರಂಗಪ್ಪ ಕುಂಕದ ಒತ್ತಾಯಿಸಿದ್ದಾರೆ..!!