ನದಾಫ್ ಹಾಗೂ ಪಿಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮ ರಚನೆಗೆ ಒತ್ತಾಯ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ 

ಕೊಪ್ಪಳ : ಹಿಂದುಳಿದ ನದಾಫ್ ಹಾಗೂ ಪಿಂಜಾರ ಸಮುದಾಯಕ್ಕೆ ಪ್ರತ್ಯೇಕ ನಿಗಮ ರಚಿಸುವಂತೆ ರಾಜ್ಯ ನದಾಫ್ ಹಾಗೂ ಪಿಂಜಾರ ಸಂಘದ ತಾಲೂಕಾ ಘಟಕದ ಪದಾಧಿಕಾರಿಗಳು ಕುಷ್ಟಗಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ರಾಜ್ಯ ಸರಕಾರವನ್ನು ಒತ್ತಾಯಪಡಿಸಿದರು..!

ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ನದಾಫ್ ಹಾಗೂ ಪಿಂಜಾರ ಇವರುಗಳನ್ನು ದೂದೇಕುಲ ಮತ್ತು ಮನ್ಸೂರಿ ಅಂತಲೂ ಕರೆಯಲ್ಪುವವರು. ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಹಿಂದುಳಿದಿರುವ ಸಮುದಾಯಕ್ಕೆ ಪ್ರತ್ಯೇಕ ನಿಗಮದ ಅವಶ್ಯಕತೆ ಇದೆ ಎಂದು ಮನವಿಯಲ್ಲಿ ಸಿಎಂ ಅವರನ್ನು ಕಾರ್ಯದರ್ಶಿ ಮಹೆಬೂಬಸಾಬ್ ವಾಯ್ ನೆರೆಬೆಂಚಿ, ಬಾಲೇಸಾಬ್ ನದಾಫ್, ರಫೀಕ್ ಸಾಬ್ ನದಾಫ್, ಯಮನೂರಸಾಬ್ ನದಾಫ್ ಹಾಗೂ ಅಲ್ಲಾಸಾಬ್ ನದಾಫ್ ಸೇರಿದಂತೆ ಇನ್ನಿತರರು  ಒತ್ತಾಯಪಡಿಸಿದ್ದಾರೆ..!!