ತೋಟಗಾರಿಕೆ ಮೇಳಕ್ಕೆ ಜಿಲ್ಲಾಧಿಕಾರಿ ಚಾಲನೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ತೋಟಗಾರಿಕೆ ಹಣ್ಣುಗಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ಚಾಲನೆ ನೀಡಿದರು..!

ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಎಂಬ ಮೂಲ ಆಶಯದ ಮೂಲಕ ಕೊಪ್ಪಳ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿದ್ದ ದಾಳಿಂಬೆ, ದ್ರಾಕ್ಷಿ, ಪೇರಲ, ಅಂಜೂರು, ಕಲ್ಲಂಗಡಿ, ಬಾಳೆ, ಪಪ್ಪಾಯ, ಅಣಬೆ ಹಾಗೂ ಜೇನು ಮಾರಾಟ ಹಾಗೂ ಪ್ರದರ್ಶನವು ಅತ್ಯಂತ ಆಕರ್ಷಣೆ ಕೇಂದ್ರವಾಗಿತ್ತು. ಪ್ರದರ್ಶನದಲ್ಲಿ ಭಾಗವಹಿಸಿದ ಬಹುತೇಕ ತೋಟಗಾರಿಕೆ ಬೆಳೆಗಾರರು ತಮ್ಮ ಹಣ್ಣುಗಳನ್ನು ಮಾರಾಟದ ಮೂಲಕ ತಮ್ಮ ಆದಾಯ ವೃದ್ದಿಸಿಕೊಂಡರು. ಪ್ರತಿವರ್ಷದಂತೆ ಈ ವರ್ಷವು ವಿವಿಧ ಹಣ್ಣುಗಳ ಮಾರಾಟ ಹಾಗೂ ಪ್ರದರ್ಶನ ಸಾಕಷ್ಟು ಜನ ಹಣ್ಣು ಪ್ರಿಯರನ್ನು ಕೈ ಬೀಸಿ ಕರೆಯುವಂತಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದು.

ಜಿಪಂ ಸಿಇಓ ಬಿ.ಪೌಜಿಯಾ ತರುನ್ನುಮ್, ಕೃಷಿ ವಿಸ್ತೀರಣಾ ಕೇಂದ್ರದ ಮುಂದಾಳು ಎಂ.ಬಿ.ಪಾಟೀಲ, ಪ್ರಗತಿ ಪರ ರೈತರಾದ ಯಂಕಣ್ಣ ಯರಾಶಿ, ಶ್ಯಾಮರಾವ್ ಕುಲಕರ್ಣಿ, ಮಲ್ಲಿಕಾರ್ಜುನ ಗಡಗಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು..!!