ಗವಿಮಠದ ರಥಕ್ಕೆ ಆಧುನಿಕ ಟಚ್

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಈ ಭಾಗದ ಸುಪ್ರಸಿದ್ಧ ಕೊಪ್ಪಳದ ಶ್ರೀ ಗವಿಮಠದ ಮಹಾ ರಥೋತ್ಸವಕ್ಕೆ ಆಧುನಿಕ ಟಚ್ ನೀಡುವ ಕಾರ್ಯ ಭರದಿಂದ ಸಾಗಿದೆ..!

ಐತಿಹಾಸಿಕ ರಥಕ್ಕೆ ಕಬ್ಬಿಣದ ಚೆಸ್ಸಿ (ಕಟ್ಟಿಗೆ ಇರಸ್ಸು ಬದಲಾವಣೆ) ಅಳವಡಿಸಲಾಗುತ್ತಿದೆ. ಅಲ್ಲದೆ, ಹಳೆಯ ಕಲ್ಲಿನ ನಾಲ್ಕು ಗಾಲಿಗಳಿಗೆ ಬ್ರೇಕ್ ಲೈನರ್ ಅಳವಡಿಸುವ ಮೂಲಕ ಮಹಾ ರಥದ ವೇಗದ ನಿಯಂತ್ರಣದ ಜೊತೆಗೆ ನೇರವಾಗಿ ಸಾಗುವ ಸದುದ್ದೇಶದ ಹಿನ್ನೆಲೆಯಲ್ಲಿ ಹ್ಯಾಂಡಲ್ ತರಹದ ಸಾಧನ ಅಳವಡಿಸುವ ಕುರಿತು ಹೊಸಪೇಟೆಯ ಪ್ರತಿಷ್ಠಿತ ಹಿಂದುಸ್ಥಾನ್ ಇಂಜಿನೀಯರಿಂಗ್ ಕಂಪನಿಯ ಇಂಜನೀಯರ್ ಪತ್ರಿಕೆಗೆ ತಿಳಿಸಿದರು. ಎಲ್ಲಾ ಅಂದುಕೊಂಡಂತೆ ಆದರೆ, 2023 ರ ಜಾತ್ರೆಗೆ ಸಕಲ ತಾಂತ್ರಿಕ ರೂಪ ಪಡೆಯುವ ಮೂಲಕ ದಕ್ಷಿಣ ಭಾರತದ ಕುಂಭಮೇಳಕ್ಕೆ (ಒಂದು ಅಡಿ ಎತ್ತರದ) ಮಹಾರಥೋತ್ಸವ ಅಣಿಯಾಗಲಿದೆ. ಮಹಾ ರಥೋತ್ಸವಕ್ಕೆ ಅಳವಡಿಸಲಾಗುತ್ತಿರುವ ನೂತನ ತಂತ್ರಗಾರಿಕೆ ಯಶಸ್ವಿಯಾಗಲಿ ಎಂಬುದು ಕೋಟ್ಯಾಂತರ ಜನ ಭಕ್ತರ ಆಶೆಯ ಕೂಡಾ ಹೌದಾಗಿದೆ..!!