ಶಾಲಾಭಿವೃದ್ಧಿಗೆ ಎಸ್.ಡಿ.ಎಮ್.ಸಿ ಬೆನ್ನೆಲುಬು ಇದ್ದಂತೆ : ಅಯ್ಯಪ್ಪ ಸುರುಳ

 

 

ಕೃಷಿ ಪ್ರಿಯ ನ್ಯೂಸ್

ಕೊಪ್ಪಳ (ಕುಷ್ಟಗಿ) : ಪ್ರತಿಯೊಂದು ಶಾಲೆ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಎಸ್.ಡಿ.ಎಮ್‌.ಸಿ ಯು ಶಾಲೆಗೆ ಬೆನ್ನೆಲುಬಾಗಿ ನಿಲ್ಲಬೇಕಾಗುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಅಯ್ಯಪ್ಪ ಸುರುಳ ಹೇಳಿದರು.

ಅವರು ತಾಲೂಕಿನ ಅಡವಿಭಾವಿ ಕ್ಲಸ್ಟರ್ ಗೆ ಒಳಪಡುವ ಮಿಯ್ಯಾಪುರ ಗ್ರಾಮದ‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್.ಡಿ.ಎಮ್.ಸಿ ಸಭೆಯಲ್ಲಿ ಭಾಗವಹಿಸಿ ಪ್ರಾಸ್ತಾಕವಾಗಿ ಮಾತನಾಡಿದರು.

ಅಡವಿಭಾವಿ ಕ್ಲಸ್ಟರ್ ಗೆ ಒಳಪಡುವ 11 ಶಾಲೆಗಳ ಅಭಿವೃದ್ಧಿಯ ಯಶೋಗಾಥೆಗಳನ್ನು ಪಿಪಿಟಿ ಮೂಲಕ ಪ್ರಸ್ತುತ ಪಡಿಸಿದರು.

ಉದ್ಘಾಟಕರಾಗಿ ಆಗಮಿಸಿದ್ದ ಅಡವಿಭಾವಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಜಕುಮಾರ ನಾಯ್ಕ್ ಮಾತನಾಡಿ, ಶಾಲೆಗಳು ಅಭಿವೃದ್ದಿ ಹೊಂದಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರ ಜವಾಬ್ಧಾರಿ ಪ್ರಮುಖವಾಗಿದೆ ಎಂದರು.

ಬಿ.ಆರ್.ಪಿ. ಜೀವನಸಾಬ ಬಿನ್ನಾಳ ಮಾತನಾಡಿ, ಸರಕಾರದ ಸೌಲಭ್ಯಗಳನ್ನು ಪಡೆದು, ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಎಲ್ಲಾ ಪಾಲಕರು ಶ್ರಮಿಸಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕ ಸದಾಶಿವಯ್ಯ ಶಿರೂರು ವಹಿಸಿದ್ದರು.

ಈ ಸಂದರ್ಭದಲ್ಲಿ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ನಯನಾ ನಾಯ್ಕ ಅವರನ್ನು ಎಲ್ಲಾ ಶಿಕ್ಷಕರು ಸನ್ಮಾನಿಸಿದರು.

ಸಭೆಯಲ್ಲಿ ವಿವಿಧ ಶಾಲೆಯಿಂದ ಆಗಮಿಸಿದ್ದ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು, ಮುಖ್ಯಗುರುಗಳು ಹಾಗು ಸಹಶಿಕ್ಷಕರು‌ ಭಾಗ ವಹಿಸಿದ್ದರು.

ಶಿಕ್ಷಕರಾದ ಷಣ್ಮುಖಗೌಡ ನಿರೂಪಿಸಿದರೆ, ಪ್ರಭು ಬಿ. ಸ್ವಾಗತಿಸಿದರು. ನಿರಂಜನ ಅವರು ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.