ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ದಿ ವಿಜಡಮ್ ಶಾಲೆಯ ಮಕ್ಕಳಿಂದ ಸ್ವಚ್ಚತಾ ಜಾಗೃತಿ ಅಭಿಯಾನದ ಹಿನ್ನಲೆಯಲ್ಲಿ ಜಾಥಾ ಕಾರ್ಯಕ್ರಮ ಜರುಗಿತು..!
ಜಾಥಾ ನೇತೃತ್ವವಹಿಸಿಕೊಂಡಿದ್ದ ಸಂಸ್ಥೆಯ ಮುಖ್ಯಸ್ಥ ಶಂಭು ಹಿರೇಮಠ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆ ಹಿನ್ನಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಮಾಜಿಕ ಪಿಡುಗುಗಳಾದ, ಅನಕ್ಷರತೆ, ಬಾಲ್ಯವಿವಾಹ, ವರದಕ್ಷಿಣೆ ಕಿರುಕುಳ, ಹೆಣ್ಣು ಮಕ್ಕಳ ಶಿಕ್ಷಣ, ಪರಿಸರ ರಕ್ಷಣೆ, ಓಜೋನ ಪದರ ರಕ್ಷಣೆ, ನೀರಿನ ಸಂರಕ್ಷಣೆ, ಶೌಚಾಲಯ ನಿರ್ಮಾಣ, ಇನ್ನು ಅನೇಕ ಸಾಮಾಜಿಕ ಸುಧಾರಣೆಗಳನ್ನೊಳಗೊಂಡ ಘೋಷಣಾ ಫಲಕಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಮತ್ತು ಅವರಿಂದ ಘೋಷಣೆ ಹಾಕಿಸಲಾಗಿತು. ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಹಿರೇಮಠ ಹಾಗೂ ಮುಖ್ಯೋಪಾಧ್ಯಾಯ ಗುರು ಅಂಗಡಿ, ಲಕ್ಷ್ಮಿ ಕುರಟ್ಟಿ, ಆಫ್ರಿನ ಮುಚಾಲಿ, ರೇಷ್ಮಾಭಾಗವಾನ, ಯಲಿಗಾರ, ಫಕೀರಪ್ಪ ಮಂಡಗಿ ನಿಲೋಗಲ್ ಗ್ರಾಮದ ಯುವಕರು ಮತ್ತು ಗುರು ಹಿರಿಯರು ಭಾಗವಹಿಸಿದ್ದರು. ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಹಮ್ಮಿಕೊಳ್ಳಲಾಗಿತ್ತು..!!