ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮಗ್ಗದ ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ..!
ಶಿಕ್ಷಣಾಧಿಕಾರಿಗಳ ಸಮನಾಂತರ 16 ಹುದ್ದೆಗಳನ್ನು ವರ್ಗಾವಣೆಗೊಳಿಸಿದ ಸರಕಾರ ಖಾಲಿಯಾಗುವ ಕುಷ್ಟಗಿ ಕ್ಷೇತ್ರಶಿಕ್ಷಣಾಧಿಕಾರಿ ಹುದ್ದೆಗೆ ಈ ಹಿಂದೆ ಬಿಆರ್ ಸಿ ಸಮನ್ವಯಾಧಿಕಾರಿಯಾಗಿದ್ದ ಸುರೇಂದ್ರ ಆರ್ ಕಾಂಬಳೆ ಅವರನ್ನ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಕಾಂಬಳೆ ಅವರು ವಿಜಯಪುರ ಡೈಟ್ ನಲ್ಲಿ ಹಿರಿಯ ಉಪನ್ಯಾಸಕರಾಗಿ ಸೇವೆಯಲ್ಲಿದ್ದರು. ಕುಷ್ಟಗಿ ಬಿಇಓ ಆಗಿ ಅಧಿಕಾರದಲ್ಲಿದ್ದ ಚನ್ನಬಸಪ್ಪ ಮಗ್ಗದ ಅವರನ್ನು ಕೊಪ್ಪಳದ ಡೈಟ್ ಮುನಿರಾಬಾದ ಖಾಲಿ ಇರುವ ಹುದ್ದೆಗೆ ವರ್ಗಾಯಿಸಲಾಗಿದೆ..!!