ಶಾಸಕರಿಂದ ಪಂಪ ಸೆಟ್ ವಿತರಣೆ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಆಯ್ಕೆಯಾದ 26 ಜನ ಫಲಾನುಭವಿ ರೈತರಿಗೆ‌ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ಪಂಪ್ ಮೋಟರ್ ವಿತರಿಸಿದರು..!

2018-2019 ನೇ ಸಾಲಿನ ಡಿ ದೇವರಾಜ್ ಅರಸ್ ಹಿಂದುಳಿದ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾಗಿ ಈಗಾಗಲೇ ಜಮೀನಿನಲ್ಲಿ ನೀರು ಪಡೆದಿರುವ ಫಲಾನುಭವಿಗಳಿಗೆ ಪಂಪ್ ಮೋಟರ್ ವಿತರಣೆ ಮಾಡಿದ ಶಾಸಕ ಬಯ್ಯಾಪೂರು ಮಾತನಾಡಿ, ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ರೈತರು ನೀರು ಬಳಕೆಯ ಜೊತೆಗೆ ಬೆಳೆ ಆಯ್ಕೆಯಲ್ಲಿ ಜಾಣತನ ಮೆರೆಯಬೇಕಾಗಿದೆ ಎಂದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ
ಜಿಲ್ಲಾ ವ್ಯವಸ್ಥಾಪಕ ಹೆಚ್.ಸಿ. ಸಾತ್ವಿಕ್ ಗೌಡ ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ಫಲಾನುಭವಿಗಳು ಮುಖಂಡರು ಉಪಸ್ಥಿತರಿದ್ದರು..!!