ಕೊಪ್ಪಳ ಜಿಲ್ಲೆಗೆ 7 ನರೇಗಾ ರಾಜ್ಯಮಟ್ಟದ ಪ್ರಶಸ್ತಿ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಮಹಾತ್ಮಾ ಗಾಂಧಿ ನರೇಗಾ ಯೋಜನೆಯಲ್ಲಿ 2021-2022 ಸಾಲಿಗೆ ಅತ್ಯುತ್ತಮ ಸಾಧನೆಗೈದ ಜಿಲ್ಲೆಯ 7 ಜನ ಅಧಿಕಾರಿಗಳು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ..!

ಯೋಜನಾ ನಿರ್ದೇಶಕ (ಜಿಪಂ ಉಪ ಕಾರ್ಯದರ್ಶಿ) ಶರಣ ಬಸವರಾಜ.

ಇಓ, ಸೋಮಶೇಖರ್ ಬಿರಾದಾರ, ತಾಪಂ ಕುಕನೂರು.

ಟಿಐಇಸಿ, ಬಾಳಪ್ಪ ತಾಪಂ ಕನಕಗಿರಿ.

ತಾಂತ್ರಿಕ ಸಹಾಯಕ ಅಭಿಯಂತರರು ಪ್ರಶಾಂತ ಕುಮಾರ್, ತಾಪಂ ಕುಕನೂರು.

ಪಿಡಿಓ ಸಾಯಿನಾಥ ಗ್ರಾಮ ಪಂಚಾಯಿತಿ ಸಿದ್ದಾಪುರ, ತಾಪಂ ಕಾರಟಗಿ.

ಡೇಟಾ ಎಂಟ್ರಿ ಆಪರೇಟರ್, ಆನಂದ ಚಿಕ್ಕಜಂತಕಲ್, ಗ್ರಾಮ ಪಂಚಾಯಿತಿ, ಗಂಗಾವತಿ ತಾಲೂಕು.

ಬಿ ಎಫ್ ಟಿ, ಮಾರುತಿ ಸಾಳುಂಕೆ, ತಾಪಂ ಕುಷ್ಟಗಿ.


ನರೇಗಾ ಯೋಜನೆಯಲ್ಲಿನ ಎಂಐಎಸ್ ಅಂಕಿ ಅಂಶಗಳನ್ನು ಪರಿಶೀಲಿಸಿ ಉತ್ತಮ ಸಾಧನೆ ಮಾಡಿದ ಜಿಪಂ, ತಾಪಂ ಹಾಗೂ ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆ ಆಯುಕ್ತರು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ. 14-03-2022 ರಂದು ವಿಧಾನ ಸೌಧದ ಬ್ಯಾಂಕ್ವಟ್ ಹಾಲ್ ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ, ಸತ್ಕರಿಸಿ ಸನ್ಮಾನಿಸಲಾಗುವುದು. ಪ್ರಶಸ್ತಿಗೆ ಆಯ್ಕೆಯಾದ ಏಳು ಜನ ಮಹನೀಯರಿಗೆ ಜಿಪಂ ಸಿಇಓ ಬಿ.ಪೌಜಿಯಾ ತರುನ್ನಮ್ ಸೇರಿದಂತೆ ಹಿರಿಯ ಅಧಿಕಾರಿಗಳು, ಎಲ್ಲಾ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಅಭಿನಂದಿಸಿದ್ದಾರೆ..!!