ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ದೋಟಿಹಾಳ) : ರಕ್ತ ದಾನದಿಂದ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷಕುಮಾರ ಬಿರಾದರ ಅಭಿಪ್ರಾಯವ್ಯಕ್ತಪಡಿಸಿದರು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ಸ್ಥಳೀಯ ಗ್ರಾಮ ಪಂಚಾಯತ, ದಯಾನಂದಪುರಿ ಕ್ರೀಡಾ ಮತ್ತು ಸಾಂಸ್ಕೃತಿಕ ಜಾನಪದ ಕಲಾ ಸಂಘ ಹಾಗೂ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. 18 ರಿಂದ 60 ವರ್ಷದ ಆರೋಗ್ಯವಂತ ಪುರುಷ ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪಿಆರ್ ಓ ದೇವೇಂದ್ರಪ್ಪ ಹಿಟ್ನಾಳ, ಪಿಡಿಒ ಮುತ್ತಣ್ಣ, ಗ್ರಾಪಂ ಸದಸ್ಯರಾದ ಶಿವನಗೌಡ ಪೊಲೀಸ್ ಪಾಟೀಲ್, ದೇವರಾಜ ಕಟ್ಟಿಮನಿ, ಮಹೇಶ ಕಾಳಗಿ, ಲಾಡಸಾಬ್ ಯಲಬುರ್ಗಿ, ಶರೀಫಾಬಿ ಯರಡೋಣಿ, ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟೇಶ ರೆಡ್ಡಿ, ಬಸವರಾಜ ಚೋಕಾವಿ, ನಾಗರತ್ನ ಅರಮನಿ, ಪೂರ್ಣಿಮಾ ಪಾಟೀಲ್, ಸಂಘದ ಕಾರ್ಯದರ್ಶಿ ಶ್ರೀನಿವಾಸ ಕಂಟ್ಲಿ, ರಾಘವೇಂದ್ರ ಕುಂಬಾರ, ಮಂಜುನಾಥ ಬಿ ಎಮ್, ವಿಜಯಕುಮಾರ ನಾಯ್ಕರ್, ಮಾರುತಿ ಎಚ್, ಈರನಗೌಡ, ಗಾಯತ್ರಿ ಕುದರಿಮೋತಿ, ಅಮರೇಶ ಬಾದಾ ಸೇರಿದಂತೆ ಇನ್ನಿತರರಿದ್ದರು..!!