ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಶ್ರೀ ಸುಧೀಂದ್ರ ತೀರ್ಥ ಮಹಾಸ್ವಾಮಿಗಳ 400 ನೇ ಆರಾಧನಾ ಮಹೋತ್ಸವದ ಹಿನ್ನಲೆಯಲ್ಲಿ ಶ್ರೀ ಸುಬುಧೇಂದ್ರ ತೀರ್ಥ ಮಹಾಸ್ವಾಮಿಗಳು ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ನವಬೃಂದಾವನ ಗದ್ದುಗೆಗೆ ಭೇಟಿ ನೀಡಿ, ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು..!
ತಿರುಪತಿಯ ಟಿಟಿಡಿ ಸಮಿತಿಯ ಜಂಟಿ ಕಾರ್ಯನಿರ್ವಹಣಾಧಿಕಾರಿ ವೀರಬ್ರಹ್ಮಯ್ಯ ಅವರು ಟಿಟಿಡಿಯಿಂದ ಶ್ರೀ ವಾರಿ ವಸ್ತ್ರವನ್ನು ಮೆರವಣಿಗೆ ಮೂಲಕ ಕರೆತಂದಿರುವುದು ವಿಶೇಷ. ಪರಮ ಪೂಜ್ಯ ಶ್ರೀ ಸುಬುಧೇಂದ್ರ ಮಹಾಸ್ವಾಮಿಗಳು ಪಂಚಾಮೃತಾಭಿಷೇಕದ ನಂತರ ನವಬೃಂದಾವನ ಗಡ್ಡೆಯಲ್ಲಿರುವ ಶ್ರೀ ಸುಧೀಂದ್ರ ತೀರ್ಥರ ಮೂಲಬೃಂದಾವನಕ್ಕೆ ಅರ್ಪಿಸಿದರು. ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಪ್ರವಚನ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಶ್ರೀ ಕ್ಷೇತ್ರದಲ್ಲಿ ಪೂಜ್ಯ ಸ್ವಾಮೀಜಿಯವರಿಂದ ಮುದ್ರಾ ಧಾರಣೆ ಮತ್ತು ಮಂತ್ರಾಕ್ಷತೆ ಸ್ವೀಕರಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು..!!