ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಎದುರಿಸಿದ 3490 ವಿದ್ಯಾರ್ಥಿಗಳು

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್|

ಕೊಪ್ಪಳ (ಕುಷ್ಟಗಿ) : 2022 ನೇ ಸಾಲಿನ ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಇತರೆ ವಸತಿ ಶಾಲೆಗಳ 6 ನೇ ತರಗತಿ ಪ್ರವೇಶಕ್ಕೆ ಶಿಕ್ಷಣ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಒಟ್ಟು 3490 ವಿದ್ಯಾರ್ಥಿಗಳು ದಿನಾಂಕ 20-03-2022 ರಂದು ಪರೀಕ್ಷೆ ಎದುರಿಸಿದ್ದಾರೆ..!

ಕುಷ್ಟಗಿ ತಾಲೂಕಿನಲ್ಲಿ ತೆರೆಯಲಾಗಿದ್ದ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಜರಾಗಿದ್ದರು. ದಾಖಲಾದ ಒಟ್ಟು 3528 ಮಕ್ಕಳಲ್ಲಿ 3490 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 38 ವಿದ್ಯಾರ್ಥಿಗಳು ಗೈರಾಗಿದ್ದರು. ಕುಷ್ಟಗಿ ತಾಲೂಕಿನಿಂದ ಕನಕಗಿರಿ ಸೇರಿದಂತೆ ಬೇರೆ ತಾಲೂಕಿಗೆ ಹಾಜರಾದ ಒಟ್ಟು ಮಕ್ಕಳು 674 ಅದರಲ್ಲಿ 2021-2022 ನೇ ಸಾಲಿನಲ್ಲಿ ಕುಷ್ಟಗಿ ಬ್ಲಾಕ್ ನಿಂದ ಅರ್ಜಿ ಸಲ್ಲಿಸಿದ್ದ ಒಟ್ಟು ಮಕ್ಕಳ ಸಂಖ್ಯೆ 4202 ಎಂದು ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಸ್ಪಷ್ಟಪಡಿಸಿದ್ದಾರೆ..!!