ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಶಿಕ್ಷಕರ ಕ್ರಿಯಾಶೀಲತೆ ಮೇಲೆ ವಿದ್ಯಾರ್ಥಿಗಳ ಅಭಿವೃದ್ಧಿ ಸಾಧ್ಯವೆಂದು ನಿಲೋಗಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ಭೀಮನಗೌಡ ಪಾಟೀಲ ಅಭಿಪ್ರಾಯವ್ಯಕ್ತಪಡಿಸಿದರು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ದಿ ವಿಜಡಮ್ ಶಾಲೆಯಲ್ಲಿ ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯವಹಾರಿಕ ಜ್ಞಾನ, ಸಾರ್ವಜನಿಕ ಜೀವನದಲ್ಲಿ ಮಾತನಾಡುವ ಶೈಲಿ, ದಿನಬಳಕೆಯ ವಸ್ತುಗಳ ಬೆಲೆಗಳ ಬಗ್ಗೆ ತಿಳಿವಳಿಕೆ ಮೂಡಿಸುವುದಾಗಿದೆ ಎಂದು ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಹಿರೇಮಠ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ಲದೆ, ಶಾಲೆಯ ಅಭಿವೃದ್ಧಿ ಹಾಗೂ ಮಿಷನ್ 2025 ರ ಗುರಿಗಳ ಕುರಿತು ಸೇರಿದ್ದ ಪಾಲಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಮನವರಿಕೆ ಮಾಡಿಕೊಟ್ಟರು. ಸಂಸ್ಥೆಯ ಅಧ್ಯಕ್ಷ ಶರಣಯ್ಯ ಹಿರೇಮಠ ಅಧ್ಯಕ್ಷತೆವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಮಹಾಂತೇಶ ಶೆಟ್ಟರ್, ಶಿವನಗೌಡ ಪಾಟೀಲ್, ವರದಿಗಾರ ಶರಣಪ್ಪ ಕುಂಬಾರ, ಗ್ರಾಮ ಪಂಚಾಯತಿ ಸದಸ್ಯ ಮಲ್ಲಪ್ಪ ಕುಂಬಾರ, ಕಾಶಿಮ್ ಸಾಬ್ ಗೊಲ್ಲಬಾಯಿ ಶಿಕ್ಷಕರಾದ ಗುರು ಅಂಗಡಿ, ಶಂಭು ಹಿರೇಮಠ, ಲಕ್ಷ್ಮೀ ಕುರಟ್ಟಿ , ಅಫ್ರಿನ ಮುಚ್ಚಾಲಿ, ರೇಷ್ಮಾ ಭಾಗವಾನ, ಚಂದ್ರಶೇಖರ್ ಯಲಿಗಾರ, ಫಕೀರಪ್ಪ ಮಂಡಗಿ ಸೇರಿದಂತೆ ಪಾಲಕರು, ಶಿಕ್ಷಣ ಪ್ರೇಮಿಗಳು ಭಾಗವಹಿಸಿದ್ದರು..!!
ಮೆಚ್ಚುಗೆ ಪಡೆದ ಮಕ್ಕಳ ಸಂತೆ : ಇಡೀ ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಜೊತೆಗೆ ಮಕ್ಕಳ ಸಂತೆ ಬಹಳಷ್ಟು ಆಕರ್ಷಣೆ ಕೇಂದ್ರವಾಗಿತ್ತು. ಸ್ವತಃ ಮಕ್ಕಳೇ ವಿವಿಧ ತರಹದ ಕಾಯಿಪಲ್ಲೆ , ಹಣ್ಣು , ದಿನಸಿಗಳು ಸೇರಿದಂತೆ ಸಿಹಿ ವಸ್ತುಗಳ ಮಾರಾಟದ ಅನುಭವ ಮೆಚ್ಚುವಂತಿತ್ತು. ಅದರ ಅಷ್ಟೇ, ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಹೊರಹೊಮ್ಮಿತು. ಮಕ್ಕಳಲ್ಲಿದ್ದ ವ್ಯಾಪಾರ ವಹಿವಾಟದ ಅರಿವು ಅನಾವರಗೊಳಿಸಲಾಗಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರು ಶಾಲೆಯ ಶಿಕ್ಷಕರಲ್ಲಿರುವ ಕ್ರಿಯಾಶೀಲತೆ ಬಗ್ಗೆ ಮಾತನಾಡಿದ್ದು ಕೂಡಾ ಕೇಳಿಬಂದಿತು..!!