ಖರೀದಿಯಾಗಿದ್ದ 40 ಎಕರೆ ಗಾಯರಾಣ ಜಮೀನು  ರದ್ದು

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ :  ಜಿಲ್ಲೆಯ ಕುಷ್ಟಗಿ ತಾಲೂಕಿನ ಜಾಗೀರ ಗುಡದೂರು ಗ್ರಾಮದ ವಿವಾದಾತ್ಮಕ ಗಾಯರಾಣ ಜಮೀನು ಇತ್ತೀಚಿಗೆ ಅಷ್ಟೇ, ಕುಷ್ಟಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಕ್ಕ ಖರೀದಿಯಾಗಿತ್ತು. ಆದರೆ, ಖರೀದಿದಾರರೇ ಖುದ್ದು ರದ್ದತಿಗೆ ಮುಂದಾಗಿರುವುದು ಬೆಳಕಿಗೆ ಬಂದಿದೆ..!?

ದಿನಾಂಕ 18-01-2022 ರಂದು ಜಾಗೀರ ಗುಡದೂರು ಗ್ರಾಮದ ಸ.ನಂ 58/1 ಹಾಗೂ 58/2 ಒಟ್ಟು ಜಮೀನು 40-16 ಎಕರೆ ಜಮೀನು ದಕ್ ಖರೀದಿಯಾಗಿತ್ತು. ಆದರೆ, ಈ ಜಮೀನು ಅಲ್ಲದೆ ಇನ್ನೂಳಿದ ಜಮೀನು ಕೂಡಾ ಗ್ರಾಮದ ಗಾಯರಾಣ ಜಮೀನಾಗಿರುತ್ತದೆ ಎಂಬುದು ಜಾಗೀರ ಗುಡದೂರು ಗ್ರಾಮಸ್ಥರ ವಾದ. ಗ್ರಾಮಸ್ಥರ ವಾದಕ್ಕೆ ಸಾಕ್ಷಿ ಎಂಬುದಕ್ಕೆ 1988 ರಿಂದ 1992 ರ ವರೆಗಿನ ಪಹಣಿಯ ಕಾಲಂ ನಂಬರ್ ,12 ರಲ್ಲಿ ‘ಗಾಯರಾಣ’ ಎಂದು ನಮೂದಾಗಿದ್ದನ್ನು ಕಂದಾಯ ಇಲಾಖೆ ಅಧಿಕಾರಿಗಳು ಇತ್ತೀಚಿಗೆ  ನೀಡಿರುವ ವರದಿಗಳೇ ಸ್ಪಷ್ಟಪಡಿಸುತ್ತವೆ. ಅಲ್ಲದೆ, ಮೂಲ ಪಟ್ಟೆದಾರರಿಗೆ ಹೇಗೆ ಪರಬಾರೆಯಾಗಿತು ಎಂಬುದಕ್ಕೆ ಯಾವುದೇ ತರಹದ ಕಂದಾಯ ಇಲಾಖೆಯಲ್ಲಿ ದಾಖಲೆಗಳಲ್ಲಿ. ಗ್ರಾಮಸ್ಥರ ಹಾಗೂ ಪಟ್ಟೆದಾರರ ನಡುವಿನ ಇಂತಹ ವಿವಾದಿತ ಜಮೀನು ದಕ್ ಖರೀದಿ ಆಗಬಾರದು ಎಂಬುದಕ್ಕೆ ಗ್ರಾಮಸ್ಥರು ದಕ್ ಖರೀದಿಯಾದ ದಿನದ ಮಾರನೇ ದಿನ ಅಂದರೆ, 19-01-2022 ನ್ಯಾಯಾಲಯದ ತಡೆಯಾಜ್ಞೆ ತರುವ ಮೂಲಕ ದಕ್ ಖರೀದಿಯಾಗಿರುವ ಜಮೀನು ಮುಟೇಶನ್ ಆಗಬಾರದು, ಮೂಲತಃ ಗ್ರಾಮಕ್ಕೆ ಸೇರಿದ್ದು ಅಲ್ಲದೆ, ಇದು ಮೂಲತಃ ಗಾಯರಾಣ ಜಮೀನು ಪಕ್ಕಾ ಎಂದು ವಾದಿಸುವ ಮೂಲಕ ಮುಟೇಶನ್ ಗೆ ಗ್ರಾಮಸ್ಥರು ವಿರೋಧವ್ಯಕ್ತಪಡಿಸಿದ್ದರು. ಆದರೆ, ಏಕಾ ಏಕೀ ದಕ್ ಖರೀದಿ ಪತ್ರ ರದ್ದತಿ ಪತ್ರವಾಗಿರುವುದು ಗ್ರಾಮಸ್ಥರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಹೇಳಲಾಗುತ್ತಿದೆ. ವಿಭಿನ್ನ ಸುದ್ದಿಗಳ ಮೂಲಕ ‘ಕೃಷಿ ಪ್ರಿಯ’ ಪತ್ರಿಕೆ ಪ್ರಕರಣವನ್ನು ಬೆಳಕಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಕರಣ ಇನ್ನೂ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಾಗಿದೆ..!?