ಆಕಳ ಮೇಲೆ ಚಿರತೆ ದಾಳಿ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಸಮೀಪದ ಗುನ್ನಳ್ಳಿ ಸೀಮಾದಲ್ಲಿ ಕಟ್ಟಿಹಾಕಿದ್ದ ಆಕಳ ಮೇಲೆ ದಾಳಿ ಮಾಡಿದ ಚಿರತೆ ಗಾಯಗೊಳಿಸಿ ಪರಾರಿಯಾಗಿರುವ ನಾಲ್ಕು ದಿನಗಳ ಹಿಂದಿನ ಘಟನೆ ತಡವಾಗಿ ಬೆಳಕಿಗೆ ಬಂದಿದೆ..!Φ

‌ಕರಿಯಪ್ಪ ಡೊಳ್ಳಿನ ಎಂಬುವರಿಗೆ ಸೇರಿದ ಆಕಳಿಗೆ ಗಂಟಲು ಸೇರಿದಂತೆ ವಿವಿಧ ಕಡೆ ಪರಚಿದ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಆಕಳನ್ನು ಗಾಯಗೊಳಿಸುವ ಮುನ್ನ ಇದೆ ಗುನ್ನಾಳ ಸೀಮಾದ ಬಸವರಾಜ ಸಂಗಪ್ಪ ದೇಸಾಯಿ ಎಂಬುವರಿಗೆ ಸೇರಿದ ಆಕಳ ಮತ್ತು ಕರುವಿನ ಮೇಲೆ ಏಕಾ ಏಕೀ ದಾಳಿಗೆ ಮುಂದಾದ ಚಿರತೆಗೆ ತಾಯಿ ಆಕಳು ಕೊಂಬಿನ ತೀವಿತಕ್ಕೆ ಚಿರತೆ ಬೆದರಿ ಪರಾರಿಯಾಗಿರುವುದಾಗಿ ರೈತ ಬಸವರಾಜ ದೇಸಾಯಿ ಕೃಷಿ ಪ್ರಿಯ ಪತ್ರಿಕೆಗೆ ಸ್ಪಷ್ಟಪಡಿಸಿದ್ದಾರೆ. ಚಿರತೆ ದಾಳಿಗೆ ಆತಂಕಗೊಳಗಾದ ರೈತರು ತಮ್ಮ ಜಾನುವಾರುಗಳನ್ನು ನಿತ್ಯ ಮನೆಗಳಿಗೆ ಕರೆತರುವ ಕೆಲಸವಾಗಿದೆ. ಇದರಿಂದ ಇದ್ದ ದನಕರುಗಳನ್ನು ಮಾರಾಟಮಾಡುವುದಾಗಿ ರೈತರು ನೊಂದ ಹೇಳಿದ್ದು ಮನಮುಟ್ಟುವಂತಿತ್ತು. ಕಳೆದ ಒಂದು ತಿಂಗಳ ಹಿಂದೆ ಅಷ್ಟೇ ಆಕಳ ಕರುವೊಂದರ ಹೊಟ್ಟೆಯ ಎಲ್ಲಾ ಭಾಗವನ್ನು ಚಿರತೆ ತಿಂದು ಹಾಕಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.