ಅರಣ್ಯ ಇಲಾಖೆಯಿಂದ ಜಾಗೃತಿ ಬೀದಿ ನಾಟಕ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಡ್ಡದ ದೇವಲಾಪೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯದಲ್ಲಿ ಜರುಗಬಹುದಾದ ಬೆಂಕಿ ತಡೆಗಟ್ಟುವುದಕ್ಕೆ ಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶನ ನೀಡಲಾಗಿತು..!


ಕೊಪ್ಪಳದ ಅಬ್ದುಲ್ ಕಲಾಂ ಕಲಾ ಸಂಘದ ಕಲಾವಿದರು ಬೀದಿ ನಾಟಕ ಪ್ರದರ್ಶನ ನೀಡಿದರು. ಅರಣ್ಯ ನಾಶಕ್ಕೆ ಬೆಂಕಿ ಕಾರಣವಾಗಬಾರದು. ಬೆಂಕಿ ಬಿದ್ದಾಗ ವನ್ಯ ಜೀವಿಗಳಿಗೆ ಹಾನಿ ಜೊತೆಗೆ ಅರಣ್ಯ ಹಾಳಾಗುವ ಕುರಿತಾದ ಜಾಗೃತಿ ಸಂದೇಶವನ್ನು ನಾಟಕದ ಮೂಲಕ ಗ್ರಾಮಸ್ಥರಿಗೆ ತಿಳಿವಳಿಕೆ ನೀಡಲಾಗಿತು. ಉಪ ವಲಯ ಅರಣ್ಯಾಧಿಕಾರಿ ಲಾಲಸಾಬ್ ಸೂಳಿಬಾವಿ, ಅರಣ್ಯ ರಕ್ಷಕರಾದ ಕಳಕಪ್ಪ ಬ್ಯಾಳಿ, ಶಂಕರಗೌಡ ಅಕ್ಕೇರಿ, ಅರಣ್ಯ ವಿಕ್ಷಕರಾದ ದೇವಪ್ಪ ಸ್ವಾಮಿ, ಮಾಯಪ್ಪ ಕಟ್ಟಿಮನಿ ಗ್ರಾಮದ ಮುಖಂಡರು ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು..!!