ಪ್ರಶ್ನೆ ಪತ್ರಿಕೆಯಲ್ಲಿ ಪುನೀತ್ ರಾಜಕುಮಾರ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಅವರ ಸಂಕ್ಷಿಪ್ತ ಜೀವನ ಚರಿತ್ರೆ ಕುರಿತು ಬೆಂಗಳೂರಿನ ವಿಜಯನಗರದ ದಿ ನ್ಯೂ ಕ್ಯಾಂಬ್ರಿಜ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಿದ ಪ್ರಶ್ನೆ ಪತ್ರಿಕೆಯ ಗದ್ಯ ಭಾಗದ ಪುಟ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ..!

29-10-2021ರಂದು ಇಹಲೋಕ ತ್ಯಜಿಸಿದ ಡಾ.ಪುನೀತ್ ರಾಜಕುಮಾರ ಕನ್ನಡದ ರತ್ನ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ‘ಬೆಟ್ಟದ ಹೂ’ ಚಿತ್ರದಲ್ಲಿ ಬಾಲನಟನಾಗಿ ಅಮೋಘ ಅಭಿನಯ ಮೂಲಕ ಮುಡಿಗೇರಿಸಿಕೊಂಡು, ಭಾರತೀಯ ಚಿತ್ರನಟರಾಗಿ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ ಅವರು ಪೂರ್ಣ ಪ್ರಮಾಣದ ನಾಯಕನಟರಾಗಿ 29 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ.
ಅಪ್ಪು, ಪವರ್ ಸ್ಟಾರ್, ಕನ್ನಡದ ರಾಜರತ್ನ , ಯುವರತ್ನ ಎಂಬ ಬಿರುದು ಪಡೆದ ಪುನೀತ್ ಅವರು ಸದ್ದಿಲ್ಲದೇ ಸಮಾಜಸೇವೆ ಮಾಡಿ ರಾಷ್ಟ್ರಕ್ಕೆ ಮಾದರಿಯಾಗಿದ್ದರು. ದಿವಂಗತ ಡಾ.ಪುನೀತ್ ರಾಜಕುಮಾರ ಅವರ ಸಂಕ್ಷಿಪ್ತ ಜೀವನ ಚರಿತ್ರೆ ಕುರಿತು ಪ್ರಶ್ನೆ ಪತ್ರಿಕೆಯಲ್ಲಿ 80 ಅಂಕಗಳಿಗೆ ‘ಗದ್ಯ ಭಾಗ ಓದಿಕೊಂಡು ಉತ್ತರಿಸಲು ನೀಡಿದ ಪ್ರಶ್ನೆಯ ಪುಟವೊಂದು ಫುಲ್ ವೈರಲ್ ಆಗಿದೆ. ಆ ಪೋಸ್ಟ್ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿನ ನೆಟ್ಟಿಗರ ಹಾಗೂ ಪುನೀತ್ ಅಭಿಮಾನಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವುದಂತು ಸತ್ಯ..!!