ಕುಷ್ಟಗಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ ಆರಂಭ : ಚಂದ್ರಶೇಖರ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ 18 ಕೇಂದ್ರಗಳಲ್ಲಿ ಆರಂಭವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಆರಂಭಗೊಂಡಿವೆ ಎಂದು ಶಿಕ್ಷಣ ಇಲಾಖೆ ಸಹ ನಿರ್ದೇಶಕ ಚಂದ್ರಶೇಖರ ತಿಳಿಸಿದರು..!

ಜಿಲ್ಲೆಯ ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಸಮಯದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಜರುಗಿಲ್ಲ. ಪರೀಕ್ಷೆ ಆರಂಭದ ಸಮಯದಲ್ಲಿ ಮಾತ್ರ ಯಾವ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬಂದಿಲ್ಲವೆಂದ ಅವರು, ಪರೀಕ್ಷೆ ಅವಧಿ ಮುನ್ನ ಧರಿಸಿರುವುದಕ್ಕೆ ಇಲಾಖೆಗೆ ಸಂಬಂಧಪಡುವುದಿಲ್ಲವೆಂದು ಸ್ಪಷ್ಟಪಡಿಸಿದರು. ಈ ವರ್ಷದ ಪರೀಕ್ಷೆಯಲ್ಲಿ ಹೆಚ್ಚುವರಿಯಾಗಿ ನೀಡಿದ 15 ನಿಮಿಷಗಳ ಕಾಲಾವಧಿ ವಿದ್ಯಾರ್ಥಿಗಳ ಅಂಕಗಳಿಕೆ ಪುಷ್ಟಿ ನೀಡುತ್ತದೆ ಎಂದರು. 5032 ವಿದ್ಯಾರ್ಥಿಗಳ ಪೈಕಿ 4862 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಧರ್ಮಕುಮಾರ ಕಂಬಳಿ, ವಿಚಕ್ಷಣಾ ದಳದ ಮುಖ್ಯಸ್ಥ ಡಿ.ಎಮ್.ಹೊಸಮನಿ, ವಿಂಕೋಬ, ದೇವೇಂದ್ರಪ್ಪ , ಶ್ರೀಶೈಲ ಸೋಮನಕಟ್ಟಿ , ವಿಜಯಕುಮಾರ್, ಇಸಿಓ ದಾವಲಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..!!