ಇಸ್ಪೀಟ್ ಜೂಜಾಟ : 9 ಜನರ ಬಂಧನ ಓರ್ವ ಪರಾರಿ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ರಾಜಾರೋಷವಾಗಿ ಹಾಡು ಹಗಲೇ ಹತ್ತು ಜನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ 9 ಜನರನ್ನು ಬಂಧಿಸಿದ್ದಾರೆ. ಬಂಧನ ವೇಳೆ ಇನ್ನೋರ್ವ ಪರಾರಿಯಾಗಿರುವುದು ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ದಿನಾಂಕ 29-03-2022 ರಂದು ಘಟನೆ ನಡೆದಿದೆ..!

ಗ್ರಾಮದ ಜನನಿಬಿಡ ಪ್ರದೇಶದ ಅಗಸಿ ಬಾಗಿಲು ಬಳಿ ಅದೇ ಗ್ರಾಮದ ಚಂದುಸಾಬ ಜಿನ್ನದ್, ಚೆನ್ನವೀರಯ್ಯ ಮಾಲಿಪಾಟೀಲ, ಲಕ್ಷ್ಮಪ್ಪ ಆಲಮೋರ, ಶಿವಪ್ಪ ತಲೆಖಾನ, ಪರಸಪ್ಪ ಕಟ್ಟಿಮನಿ, ಪ್ರಕಾಶ, ಹನಮಪ್ಪ ಕಬ್ಬೇರ, ಮಹಾಂತೇಶ ತೋಟದ, ಶಿವಪ್ಪ ಟೆಂಗುಂಟಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಅದೇ ಗ್ರಾಮದ ಬಸವರಾಜ ಇದ್ಲಾಪೂರ ಎಂಬುವನು ಬಂಧನದ ವೇಳೆ ಪರಾರಿಯಾಗಿದ್ದು, ಪತ್ತೆಗೆ ಶೋಧನೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೂಜಾಟದಲ್ಲಿ 6010 ರೂಪಾಯಿಗಳು ಹಾಗೂ ಜೂಜಾಟಕ್ಕೆ ಬಳಸಿದ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರ ಮೇಲೆ ಗುನ್ನೆ ನಂ. 52/2022 ಕಲಂ : 87 ಕೆ.ಪಿ. ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಕುಷ್ಟಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ..!!