ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪುರಸಭೆಯು 2022-2023 ನೇ ಸಾಲಿಗಾಗಿ 11,74,200=00 ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಲಾಗಿತು..!
ತಾಪಂ ಆವರಣದಲ್ಲಿ ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಉಳಿತಾಯ ಬಜೆಟ್ ಗೆ ಅನುಮೋದನೆ ಪಡೆಯಲಾಗಿತು. ಸಭೆಯಲ್ಲಿ ಉಪಾಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಮುಂಗಡ ಆಯವ್ಯಯಕ್ಕೆ ಸರ್ವ ಸಮ್ಮತದ ಒಪ್ಪಿಗೆ ಸೂಚಿಸಿದರು. 16,26,54,671=00 ರೂಪಾಯಿಗಳ ಒಟ್ಟು ಸ್ವೀಕೃತಿಗಳ ಅಂದಾಜಿನ 16,14,80,471=00 ರೂಪಾಯಿಗಳ ಒಟ್ಟು ಪಾವತಿಗಳಿಗೆ 11,74,200=00 ರೂಪಾಯಿಗಳ ಉಳಿತಾಯ ಹಣ ಮುಂಗಡ ಪತ್ರಕ್ಕೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ತಳವಾರ ಅಧಿಕೃತ ಒಪ್ಪಿಗೆ ಪಡೆದರು. ಕಳೆದ ವರ್ಷ 19,52,77,365=00 ರೂಪಾಯಿಗಳ ಅಂದಾಜು ಕರ್ಚಿನಲ್ಲಿ 10,54,904=00 ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಉಪಾಧ್ಯಕ್ಷೆ ಹನುಮವ್ವ ಅಯ್ಯಪ್ಪ ಕೋರಿ, ಗೀತಾ ಮಹೇಶ ಕೋಳೂರು, ರಾಜೇಶ ಪತ್ತಾರ, ಕಲ್ಲೇಶ ತಾಳದ, ಬಸವರಾಜ ಬುಡಕುಂಟಿ, ಮೈಬೂಬ್ ಕಮ್ಮಾರ, ರಾಮಣ್ಣ ಬಿನ್ನಾಳ, ವೀರೇಶ ಬೆದವಟ್ಟಿ , ನಾಗರಾಜ ಹಿರೇಮಠ, ಜೆ.ಜೆ.ಆಚಾರ್ಯ, ಕಚೇರಿ ವ್ಯವಸ್ಥಾಪಕ ಷಣ್ಮುಖಪ್ಪ, ಚಿರಂಜೀವಿ ದೊಡ್ಡಮನಿ, ಪ್ರೀತಿ ಬಾಂಡಗೆ ಸೇರಿದಂತೆ ಸಿಬ್ಬಂದಿ ವರ್ಗ ನೂತನ ಬಜೆಟ್ ಗೆ ಸಾಕ್ಷಿಯಾದರು..!!