02-05-2022 ರಂದು ರಂಜಾನ್ ರಜೆ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಮುಸ್ಲಿಂ ಧರ್ಮದ ಪವಿತ್ರ ಹಬ್ಬವಾಗಿರುವ ರಂಜಾನ್ ನಿಮಿತ್ಯ ದಿನಾಂಕ 02-05-2022 ರಂದು ‘ಸಾರ್ವತ್ರಿಕ ರಜೆ’ ದಿನ ಎಂದು ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ..!

ಮೂನ್ ಕಮೀಟಿ, ಖುತುಬ್-ಎ-ರಂಜಾನ್ ಹಬ್ಬವನ್ನು 02-05-2022 ರಂದು ಆಚರಿಸಲು ತೀರ್ಮಾನಿಸಿದ ಹಿನ್ನಲೆಯಲ್ಲಿ ರಾಜ್ಯ ಸರಕಾರ ಈಗಾಗಲೇ 2022 ರಜಾ ದಿನಗಳ ಪಟ್ಟಿಯಲ್ಲಿ ಪ್ರಕಟಿಸಿದ 03-05-2022 ದಿನವನ್ನು ‘ಸಾರ್ವತ್ರಿಕ ರಜಾ’ ದಿನವೆಂದು ಘೋಷಿಸಲಾಗಿತ್ತು. ಆದರೆ, ನೆಗೋಷಿಯೆಬಲ್ ಇನಸ್ಟ್ರುಮೆಂಟ್ ಆ್ಯಕ್ಟ್ 1881 ಪ್ರಕಾರವು ಕೂಡಾ ಸಾರ್ವತ್ರಿಕ ರಜೆ ದಿನವೆಂದು ಸರಕಾರದ ಅಧೀನ ಕಾರ್ಯದರ್ಶಿ (ರಾಜ್ಯ ಶಿಷ್ಟಾಚಾರ) ಅಪೇಕ್ಷಾ ಸತೀಶ್ ಪವಾರ ಅವರು ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.