ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಡಲಗೇರಿ ಗ್ರಾಮದಲ್ಲಿ ಸಿಡಿಲಿಗೆ ಎಮ್ಮೆವೊಂದು ಸಾವನ್ನಪ್ಪಿದ ಘಟನೆ ಜರುಗಿದೆ..!
ಶಾಡಲಗೇರಿ ಗ್ರಾಮದ ಬಸಪ್ಪ ಯಮನಪ್ಪ ಹಂಡಿ ಎಂಬುವರಿಗೆ ಸೇರಿದ ಎಮ್ಮೆಯನ್ನು ಜಮೀನಿನಲ್ಲಿ ಕಟ್ಟಿ ಹಾಕಲಾಗಿತ್ತು. (ದಿನಾಂಕ 06-05-2022 ರಂದು) ಮಧ್ಯಾಹ್ನ ಸುಮಾರಿಗೆ ಸುರಿದ ಮಳೆಯ ಜೊತೆಗೆ ಗಾಳಿವೊಂದಿಗೆ ಬಡಿದ ಸಿಡಿಲಿಗೆ ಎಮ್ಮೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಸುಮಾರು 50 ಸಾವಿರ ರೂಪಾಯಿಗಳ ಮೌಲ್ಯದ ಎಮ್ಮೆ ಕಳೆದುಕೊಂಡ ರೈತ ಸೇರಿದಂತೆ ಈ ಭಾಗದ ರೈತರು ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ..!!