ಮಾದರಿಯಾದ ನಿಲೋಗಲ್ ‘ದಿ ವಿಜಡಮ್ ಶಾಲೆ’

ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ದಿ ವಿಜಡಮ್ ಶಾಲೆಯು ಇಂದಿನ ಆಧುನಿಕ ಯುಗದಲ್ಲಿ ಕಡಿಮೆ ವೆಚ್ಚದಲ್ಲಿ ಮೌಲ್ಯಯುತವಾದ ಶಿಕ್ಷಣ ನೀಡುವುದಕ್ಕೆ ಈ ಭಾಗದಲ್ಲಿ ಮಾದರಿಯಾಗಿದೆ..!

ಈ ಶಿಕ್ಷಣ ಸಂಸ್ಥೆಯು 2017 ರಲ್ಲಿ ಪ್ರಾರಂಭವಾಗಿದ್ದು, ತನ್ನದೇ ಆದ ಈ ಕೆಳಗಿನ ಉತ್ತಮ ಮೌಲ್ಯಗಳ ಜೊತೆಗೆ ದೂರ ದೃಷ್ಟಿಕೋನ ಮತ್ತು ಸದುದ್ದೇಶಗಳನ್ನು ಹೊಂದಿದೆ.

* ದೃಷ್ಟಿಕೋನ *

ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸುವುದು.

* ಮೌಲ್ಯಗಳು *

ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಗ್ರಾಮೀಣ ಮಕ್ಕಳ ಜೀವಮಾನವಿಡೀ ಛಾಪು ಮೂಡಿಸುವ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವುದು.

* ಉದ್ದೇಶಗಳು *

– ಗ್ರಾಮೀಣ ಮಕ್ಕಳಿಗೆ ನಿರಂತರ ಮೌಲ್ಯಯುತವಾದ ಶಿಕ್ಷಣ ನೀಡುವಿಕೆ ಮತ್ತು ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು.

– ಅತಿ ಕಡಿಮೆ ವೆಚ್ಚದಲ್ಲಿ ಆಧುನಿಕ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು.

– ಸಾಮಾಜಿಕ ಸಮಸ್ಯೆಗಳಾದ, ಬಾಲ್ಯ ವಿವಾಹ, ಮಹಿಳಾ ಶಿಕ್ಷಣದ ಪ್ರಾಮುಖ್ಯತೆ, ಪರಿಸರ ಸಂರಕ್ಷಣೆ, ಮತ್ತು ವಯಕ್ತಿಕ ಸ್ವಚ್ಛತೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು.

– ‘ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು’ ಎಂಬಂತೆ ಶಿಕ್ಷಣವನ್ನು ಹೆಚ್ಚು ಹೆಚ್ಚು ಅಭಿವೃದ್ಧಿ ಪಡಿಸುವುದು.

– ಶಾಲಾ ಆಡಳಿತ ಮಂಡಳಿಯವರ ಪ್ರಕಾರ ಸಂಸ್ಥೆಯ ವಿಶೇಷತೆಗಳು

– ಶಾಲಾ ಮೂಲಸೌಕರ್ಯಗಳು ಮತ್ತು ವಿಶೇಷತೆಗಳು.

– ವಿಶಾಲವಾದ ಆಟದ ಮೈದಾನ.

– ನಿಯಮಿತವಾದ ಸಿಸಿ ಕ್ಯಾಮರಾ ಕಣ್ಗಾವಲು.

– ಶುದ್ಧ ಕುಡಿಯುವ ನೀರಿನ ವ್ಯವಸ್ಥೆ.

– ನುರಿತ ಅನುಭವವುಳ್ಳ ಶಿಕ್ಷಕ ಮತ್ತು ಶಿಕ್ಷಕಿಯರಿಂದ ಬೋಧನೆ.

– ಸುಸಜ್ಜಿತವಾದ ಕೊಠಡಿಗಳು ಮತ್ತು ಶಾಲಾ ವಾಹನಗಳ ಸೌಲಭ್ಯ.

– ಜ್ಞಾನದ ಮಾಪನ ಮತ್ತು ಅದಕ್ಕನುಗುಣವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು.

– ಕಂಪ್ಯೂಟರ್ ಆಧಾರಿತ ಶಿಕ್ಷಣ.

– ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪ್ರತಿ 2 ಮತ್ತು 4 ನೇ ಶನಿವಾರವನ್ನು ಸಂಭ್ರಮ ಶನಿವಾರವಾಗಿ ಆಚರಿಸಲಾಗುತ್ತದೆ.

– ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಪಾಲಕರಿಗೆ ಮತ್ತು ಮಕ್ಕಳಿಗೆ ವಿಶೇಷ ಸಭೆ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಕಾರ್ಯಕ್ರಮ.

– ಸಮಾಜಕ್ಕೆ ವಿಶೇಷ ಸಂದೇಶ ನೀಡುವ ಸಾಮಾಜಿಕ ಜಾಥ ಕಾರ್ಯಕ್ರಮ.

– ಪಾಲಕರ ಸಭೆಯ ಮೂಲಕ ಪ್ರತಿ 60 ರಿಂದ 90 ದಿನಕೊಮ್ಮೆ ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿ ರವಾನೆ.

– ಮಕ್ಕಳಿಗೆ ಇಂಗ್ಲೀಷ್ ಭಾಷಾ ಕಲಿಕೆ ಜೊತೆಗೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವೇದಿಕೆ ಮೇಲೆ ಕರೆತರುವುದು.

– ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಸ್ನಾತಕೋತ್ತರ ಪದವೀಧರಾದ ಬಸವರಾಜ ಹಿರೇಮಠ ರವರು ಈ ಸಂಸ್ಥೆಯ ಬಗ್ಗೆ ವಿಶೇಷ ಕಾಳಜಿವಹಿಸಿರುವುದು ವಿಶೇಷ. ತಮ್ಮ ಬಾಲ್ಯದಲ್ಲಿನ ಶಿಕ್ಷಣದ ಕುಂದು ಕೊರತೆಗಳು ಇಂದಿನ ಯುವ ಪೀಳಿಗೆಗೆ ತೊಂದರೆ ಆಗಬಾರದು ಮತ್ತು ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಯಾವುದೇ ಪ್ರಮಾಣದಲ್ಲಿ ಕಡಿಮೆಯಾಗಬಾರದು ಎನ್ನುವುದರ ಮೂಲಕ, ಸಂಸ್ಥೆಯು ನಮ್ಮ ಹನಮನಾಳ ಭಾಗದ ಎಲ್ಲಾ ಶಾಲೆಗಳಿಗಿಂತಲೂ ಸ್ವಲ್ಪ ಮುಂದೆ ದಾಪುಗಾಲು ಹಾಕಬೇಕು ಎನ್ನುವ ಆಶಯ ಹೊಂದಿರುವುದು ವಿಶೇಷತೆಗಳಲೊಂದು ವಿಶೇಷ. ಇಂತಹ ಅತ್ಯದ್ಭುತ ಆಶಯಗಳನ್ನು ಹೊಂದಿರುವ ಶಾಲೆಗೆ ನಿಮ್ಮ ಮಕ್ಕಳನ್ನು ಕಳುಹಿಸಿ ಈ ಮೇಲಿನ ಎಲ್ಲಾ ಸೌಕರ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಮತ್ತು ಶಾಲೆಯನ್ನು ಬೆಳೆಸಿ ಪ್ರೋತ್ಸಾಹಿಸಬೇಕೆಂಬುದು ಸಂಸ್ಥೆಯ ಆಶಯ ಕೂಡಾ ಒಂದಾಗಿದೆ.

* ಪಾಲಕರ ಅಭಿಪ್ರಾಯ *

ನನ್ನ ಮಗಳು 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕಳೆದ ಕೇವಲ 5 ತಿಂಗಳಲ್ಲಿ ಶೈಕ್ಷಣಿಕವಾಗಿ ಬಹಳಷ್ಟು ಬದಲಾವಣೆಯಾಗಿದ್ದಾಳೆ. ಈ ಶಾಲೆಗೆ ನಮ್ಮ ಮಗಳನ್ನು ಸೇರಿಸಿದ್ದು ನಮಗೆ ಖುಷಿ ತಂದಿದೆ.

ಶ್ರೀ ಬಂಡೆಪ್ಪ ಹನಮನಾಳ, ಪಾಲಕರು.

* ಶಿಕ್ಷಕರ ಅಭಿಪ್ರಾಯ *

ಈ ಶಾಲೆಯು ಅರ್ಹ ಪದವಿ ಜೊತೆಗೆ ಸಾಕಷ್ಟು ಅನುಭವಿ ಶಿಕ್ಷಕ ಶಿಕ್ಷಕಿಯರನ್ನು ಹೊಂದಿದೆ. ಇಲ್ಲಿ ಪಠ್ಯ ಮತ್ತು ವಿಶೇಷ ಪಠ್ಯೇತರ ಚಟುವಟಿಕೆಯ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ.

 

ತಮ್ಮ ನಂಬುಗೆಯ ಆತ್ಮೀಯ

ಶ್ರೀ ಶಂಭು ಹಿರೇಮಠ
ದಿ ವಿಜಡಮ್ ಶಾಲೆ, ನಿಲೋಗಲ್.

ಮೊ – 78291 67484