ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡರಗಲ್ ಗ್ರಾಮದಲ್ಲಿಂದು (೧೦-೦೫-೨೦೨೨) ಮಹರ್ಷಿ ಶ್ರೀ ಭಗೀರಥ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಇಬ್ಬರ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಿರುವುದು ವಿಶೇಷವಾಗಿತ್ತು..!
ಈ ಸರಳ ವಿಶೇಷ ಕಾರ್ಯಕ್ರಮದಲ್ಲಿ ಸಮುದಾಯಗಳ ಮುಖಂಡರು ಮಹರ್ಷಿ ಶ್ರೀ ಭಗೀರಥ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ನೆರವೇರಿಸುವುದರ ಮೂಲಕ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕಾಂಗ್ರೆಸ್ ಮುಖಂಡ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪೂರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ ಕುಂಟನಗೌಡ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನೇಮಣ್ಣ ಮೇಲಸಕ್ರಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಬಸವರಾಜ ಹಡಪದ, ರಂಗಪ್ಪ ವಣಗೇರಿ, ಗ್ರಾಮದ ಮುಖಂಡರಾದ ಬಸನಗೌಡ ಅ.ಪಾಟೀಲ್, ಬಾಲನಗೌಡ ಪಾಟೀಲ್, ಶರಣಪ್ಪ ತಳವಾರ, ಹನುಮಪ್ಪ ವಣಗೇರಿ, ಬಸವರಾಜ ವಣಗೇರಿ, ರೈತ ಸಂಘದ ಅಧ್ಯಕ್ಷ ಮರಿಲಿಂಗಪ್ಪ ಮೇಟಿ, ಶರಣಪ್ಪ ಗೌಡ್ರ, ಸೋಮನಗೌಡ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷ ಸೋಮಪ್ಪ ಹಡಪದ, ಪರಸಪ್ಪ ಚಳಗೇರಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು..!!