ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಬಾರ್ ಎಂಡ್ ರೆಸ್ಟೋರೆಂಟ್ (ಸಿ.ಎಲ್-7) ಪರವಾನಿಗಾಗಿ ಹಣ ಪಡೆಯುವಾಗ ಅಬಕಾರಿ ಡಿಸಿ ಎಸಿಬಿ ಬಲಿಗೆ ಬಿದ್ದಿರುವ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಜರುಗಿದೆ..!
ನೂತನ ಬಾರ್ ಎಂಡ್ ರೆಸ್ಟೋರೆಂಟ್ ಪರವಾನಿಗೆ ಸಂಬಂಧಪಟ್ಟಂತೆ ಕುಷ್ಟಗಿ ಪಟ್ಟಣದ ಶೈಲಜಾ ಪ್ರಭಾಕರಗೌಡ ಎಂಬುವರಿಂದ ಒಂದು ಲಕ್ಷ ರೂಪಾಯಿಗಳ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳ ದಾಳಿಗೆ ಅಬಕಾರಿ ಡಿಸಿ ಶೇಲಿನಾ ಸಿಕ್ಕಿ ಬಿದ್ದಿರುವ ಘಟನೆ ಜರುಗಿದೆ. ಬಾರ್ ಎಂಡ್ ರೆಸ್ಟೋರೆಂಟ್ ಪರವಾನಿಗೆ ನೀಡಲು ಮಾಲಿಕರಿಂದ ಮೂರು ಲಕ್ಷ ರೂಪಾಯಿಗಳ ಬೇಡಿಕೆ ಇಡಲಾಗಿತ್ತು. ಆದರೆ, 14-05-2022 ರಂದು ಸಾಯಂಕಾಲ ಒಂದು ಲಕ್ಷ ರೂಪಾಯಿಗಳ ಮುಂಗಡ ಹಣವನ್ನು ಅಬಕಾರಿ ಡಿಸಿ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಅಧಿಕಾರಿಗಳು ಶೇಲಿನಾ ಅವರನ್ನು ವಶಕ್ಕೆ ಪಡೆದು, ವಿಚಾರಣೆ ಕೈಗೊಂಡಿದ್ದಾರೆ..!!