‘ಅಮರೇಶ ಹಣಗಿ’ ಮುದಗಲ್ ಪಾಕ ಪ್ರಿಯ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಮುದಗಲ್ (ಕೊಪ್ಪಳ) : ಇದೊಂದು ಬಾಣಸಿಗ ಪ್ರಸಿದ್ಧ ಕುಟುಂಬ. ಈ ಕುಟುಂಬದ ಮುಖ್ಯಸ್ಥ  ಸಿದ್ಧಪಡಿಸಿದ ಅಡುಗೆಯಲ್ಲಿನ ‘ಸಾಂಬಾರ್’ ಅಂದರೆ ಈ ಭಾಗದವರಿಗೆ ಫೇಮಸ್..!

ಹಾಗಾದರೆ, ಈ ಬಾಣಸಿಗ ಎಲ್ಲಿಯರು, ಏನು ಎಂಬ ಇತ್ಯಾದಿ ಭಾವನೆಗಳು ನಿಮ್ಮಲ್ಲಿ ಮೂಡಿರಬಹುದು. ಅಲ್ಲವೆ..!? ಹೌದು, ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಮುದಗಲ್ ಪಟ್ಟಣದ ನಿವಾಸಿ ‘ಅಮರೇಶ ಹಣಗಿ’ ಅವರೇ ಈ ಪ್ರಸಿದ್ಧ ಬಾಣಸಿಗ ಹಾಗೂ ಅವರ ಕುಟುಂಬ.

ಹಣಗಿ ಅಂಬರೀಶಪ್ಪ (ಅಮರೇಶ) ಅಡುಗೆ ಮಾಡ್ಯಾರ್.. ಅಂದರೆ ಸಾಕು, ಬಾಯಿ ಚಪ್ಪರಿಸಿ ಊಟ ಮಾಡತೀವಿ ಅಂತಾರೆ, ಮುದಗಲ್ ನಿವಾಸಿ ಚನ್ನಬಸವ ಮಡಿವಾಳರ್. ಅಡುಗೆ ತಯಾರಿಸುವುದರಲ್ಲಿ ಅಷ್ಟು ಪ್ರಸಿದ್ಧಿ ಈ ಕುಟುಂಬ. ಅಂಬರೀಶ ಅವರ ಯಶಸ್ವಿಗೆ ಅವರ ಧರ್ಮ ಪತ್ನಿ ಮಲ್ಲಮ್ಮ ಹಣಗಿ ಅಷ್ಟೇ ಸಾಥ್ ನೀಡುತ್ತಾರೆ. ಇನ್ನೂ ನಾಲ್ಕು ಜನ ಮಕ್ಕಳು ತಂದೆ ತಾಯಿಗೆ ನೀಡುವ ನೆರವು ಮಾತ್ರ ಮರೆಯಬಾರದು. ಬಾದಾಮಿ ಪುರಿ, ಮೊತಿ ಚೂರು, ಬೂಂದೆ, ಉದುರು ಸಜ್ಜಕ್, ಲಡ್ಡು , ಬೆಲ್ಲದ ಬೂಂದೆ, ಬೆಲ್ಲದ ಜಿಲೆಬಿ ಇತ್ಯಾದಿಗಳಲ್ಲಿ ಇವರದ್ದು ಪಾಕ ಪ್ರಸಿದ್ಧಿ. ಮದುವೆ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಇವರದ್ದು ಫುಲ್ ಬ್ಯೂಜಿ ಸೇಡುಲ್. ಗೆಳೆಯರಿಂದ ಕಲಿತಿರುವ ಅಡುಗೆ ತಯಾರಿಕೆ ಕಾರ್ಯದ ಬಗ್ಗೆ ಅಂಬರೀಶ ಅವರು ಹೆಮ್ಮೆ ವ್ಯಕ್ತಪಡಿಸುತ್ತಾರೆ. ಇವರ ರುಚಿ ನಿಮಗೆ  ಆಗಬೇಕಾದರೆ ಸಂಪರ್ಕಿಸಿರಿ. ಮೊ ನಂ : 63635 25981.

ಕೃಷಿ ಪ್ರಿಯ ಕೂಡಾ ಹೌದು..! : ಕೇವಲ ಬಾಣಸಿಗ ಕಾರ್ಯಕ್ಕೆ ಸೀಮಿತವಾಗಿರದ ಅಮರೇಶ ಹಣಗಿ ಕುಟುಂಬವು ಕೃಷಿ ಪ್ರಿಯ ಅಂದರೆ, ತಪ್ಪಾಗಲಾರದು. ಬಾಣಸಿಗ ಕಾರ್ಯ ಇಲ್ಲದ ಸಮಯದಲ್ಲಿ ಇವರದ್ದು ಪೂರ್ಣ ಕೃಷಿ ಕಾಯಕ. ಬಾಣಸಿಗ ಕಾರ್ಯವಷ್ಟೇ ಕೃಷಿಯಲ್ಲಿ ತೊಡಗಿಕೊಳ್ಳುತ್ತೇವೆ ಎಂದು ಅಮರೇಶ ಮಾತ್ರ ಕೃಷಿ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.