ಡಾ.ಅಂಬೇಡ್ಕರ್ ಕನಸು ನನಸಾಗಿಲ್ಲ : ಮುತಾಲಿಕ್

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಮುದಗಲ್ (ಕೊಪ್ಪಳ) : ದೇಶದಲ್ಲಿ ಅಸ್ಪೃಶ್ಯತೆ ಜೀವಂತವಿದೆ, ಸಾಮಾಜಿಕ ನ್ಯಾಯ ಇನ್ನೂ ಸಿಗದೇ ಇರುವುದರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸು ನನಸಾಗಿಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಕಳವಳ ವ್ಯಕ್ತಪಡಿಸಿದರು..!

ಪಕ್ಕದ ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ದಿನಾಂಕ-15-05-2022 ರಂದು ಪತ್ರಕರ್ತ ನಾಗರಾಜ ಮಡಿವಾಳರ್ ಅವರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ದಂಪತಿಗೆ ಆಶೀರ್ವದಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ್ದಿಷ್ಟು, ಹಿಂದೂ ಸಂಘಟನೆ ಕಾರ್ಯಕರ್ತರ ಮೂಲಕ ಅಸ್ಪೃಶ್ಯತೆ ಆಚರಣೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭ ಮಾಡಿದ್ದೇವೆ. ಮತಾಂತರ ತಡೆಯುವುದು, ಕೆರೆ, ಬಾವಿ, ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯತೆ ಹೊಗಲಾಡಿಸಲು ಪ್ರಾಮಾಣಿಕವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ ಇನ್ನೂ ಸಂಪೂರ್ಣ ಅಸ್ಪೃಶ್ಯತೆ ಹೋಗಿಲ್ಲ. ಡಾ.ಅಂಬೇಡ್ಕರ್ ಅವರ ಕನಸು ಇನ್ನೂ ನನಸಾಗಿಲ್ಲ ಅನ್ನುವಂತಹ ದುಃಖ ನೋವು ಇದೆ. ಕೆಳ ವರ್ಗದ ಹಿಂದು ಹುಡುಗಿಯರ ಅತ್ಯಾಚಾರ, ಯುವಕರ ಕೊಲೆ ಪ್ರಕರಣಗಳು ನಡೆಯುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಸಮರ್ಪಕವಾಗಿ ತನಿಖೆ ನಡೆಸಬೇಕು ಎಂದು ಬಲವಾಗಿ ಒತ್ತಾಯಿಸುತ್ತೇನೆ ಎಂದರು. ಮುಸ್ಲಿಮರು ಇಡೀ ದೇಶದಲ್ಲಿ ಪ್ರಮುಖ ದೇವಸ್ಥಾನಗಳಾದ 12 ಜ್ಯೋತಿರ್ಲಿಂಗಗಳಲ್ಲಿ ಕಾಶಿ ವಿಶ್ವನಾಥ್ ಅತ್ಯಂತ ಪ್ರಮುಖ ದೇವಸ್ಥಾನದ ನಂದಿ ವಿಗ್ರಹ ಮಸೀದಿ ಎದುರುಗಡೆ ಇದೆ. ಶ್ರೀ ಕೃಷ್ಣ ಜನ್ಮಸ್ಥಾನ ಮಥುರಾ ದೇವಸ್ಥಾನ ಗೋಡೆ ಒಂದೆಡೆ ಮಸಿದೆ ಇದೆ. ಹೀಗೆ ದೇಶದಾದ್ಯಂತ ಮುವತ್ತು ಸಾವಿರ ದೇವಸ್ಥಾನಗಳನ್ನು ಒಡೆದು, ಮಸೀದಿ ಕಟ್ಟಿರುವು ದಾಖಲೆ ಇದೆ. ಮುಸ್ಲಿಮರು ಸ್ವಹರ್ಷದಿಂದ ಆನಂದದಿಂದ ದೇವಸ್ಥಾನ ಬಿಟ್ಟುಕೊಡಬೇಕು. ಆಗ ಮಾತ್ರ ಹಿಂದೂ ಮುಸ್ಲಿಂ ಸೌಹಾರ್ದತೆ ಮೂಡಲು ಸಾಧ್ಯ. ಹಠದಿಂದ ನಾನು, ನನ್ನದು ಎಂಬ ಮುಸ್ಲಿಮರ ಸೊಕ್ಕಿನ ವರ್ತನೆಯಿಂದ ಸಂಘರ್ಷಕ್ಕೆ ದಾರಿಯಾಗುತ್ತದೆ. ಕೋರ್ಟಿನಿಂದ ಮತ್ತೆ ಹೋರಾಟ ಮಾಡಬೇಕಾಗುತ್ತದೆ. ಇದರಿಂದ ದ್ವೇಷ ಅಸೂಯೆ ನಿರ್ಮಾಣವಾಗುತ್ತದೆ ಹಾಗಾಗಬಾರದೇಂದರೆ ದೇವಸ್ಥಾನ ಬಿಟ್ಟುಕೊಡಬೇಕು ಎಂದರು.

ರಾಜಕೀಯ ನನಗೆ ಗೊತ್ತಿಲ್ಲ : ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಕುರಿತು, ರಾಜಕೀಯ ಕುರಿತು ನನಗೆ ಗೊತ್ತಿಲ್ಲ. ಹಿಂದೂ ಧರ್ಮದ ಬಗ್ಗೆ ಕೇಳಿದರೆ ಮಾತನಾಡುವೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರಮೋದ ಮುತಾಲಿಕ್ ಹೇಳಿದರು.