ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ರಾಯಚೂರು : ಜಿಲ್ಲೆಯ ಮುದಗಲ್ ಪಟ್ಟಣದ ಪ್ರಸಿದ್ಧ ಫೋಟೋಗ್ರಾಫರ್ ಹಾಗೂ ಪತ್ರಕರ್ತ ನಾಗರಾಜ ಮಡಿವಾಳರ್ ಅವರು ಚಂದನ ಎಂಬುವರನ್ನು ತನ್ನ ಬಾಳ ಸಂಗಾತಿಯನ್ನಾಗಿಸಿಕೊಂಡು ಹಸಿ ಮಣೆ ತುಳಿದರು..!
ಮುದಗಲ್ ಪಟ್ಟಣದ ಭಾರತ ಕಲ್ಯಾಣ ಮಂಟಪದಲ್ಲಿ ದಿನಾಂಕ 15-05-2022 ರಂದು ಮಧ್ಯಾಹ್ನ 12-28 ಕ್ಕೆ ಶುಭ ಮುಹೂರ್ತದಲ್ಲಿ ವಿಜೃಂಭಣೆಯಿಂದ ಜರುಗಿದ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಹಾಗೂ ಅಪಾರ ಬಂಧುಗಳು, ಆಪ್ತ ಮಿತ್ರರರು ಸಾಕ್ಷಿಯಾದರು. ಹೊಸ ದಿಗಂತ ಪತ್ರಿಕೆಗೆ ‘ಮುದಗಲ್’ ಭಾಗದ ಪತ್ರಕರ್ತರಾಗಿ ಈ ಭಾಗದಲ್ಲಿ ಪ್ರಸಿದ್ಧಿಯಾಗಿರುವ ಬಿ.ಕಾಂ ಪದವೀಧರ ನಾಗರಾಜ ಮಡಿವಾಳರ್ ತಮ್ಮ ಸಹೋದರಿ ಶ್ರೀಮತಿ ನೀಲಮ್ಮ ದಿ.ರಾಮಣ್ಣ ಮಡಿವಾಳರ್ ಇವರ ಜೇಷ್ಠ ಸುಪುತ್ರಿ ಬಿ.ಕಾಂ ಪದವೀಧರೆ ಚಿ.ಕುಂ.ಸೌ. ಚಂದನ ಅವರನ್ನು ವರಿಸಿದರು.
ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಶಾಸಕ ಡಿ.ಎಸ್.ಹೂಲಗೇರಿ, ಮುದಗಲ್ ಪಟ್ಟಣದ ಕಲ್ಯಾಣ ಆಶ್ರಮದ ಶ್ರೀ ಮಹಾಂತಮಹಾಸ್ವಾಮಿಗಳು, ಲಿಂಗಸ್ಗೂರು ಮಾತಾ ಮಾಣಿಕ್ಯೇಶ್ವರಿ, ಮುಖಂಡರಾದ ಸಿದ್ದು ವಾಯ್ ಬಂಡಿ, ಶಿವಪುತ್ರಪ್ಪ ಗಾಣದಾಳ, ಹೊನ್ನೂರಪ್ಪ ಮೇಟಿ, ಶ್ರೀಮಂತ ವಜ್ಜಲ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಹರ್ಷಾ ಮುತಾಲಿಕ್
ಸೇರಿದಂತೆ ಪತ್ರಕರ್ತರಾದ ಶಾಮೀದ್ ಎನ್, ಶರಣಪ್ಪ ಕುಂಬಾರ, ಭೀಮನಗೌಡ ಪಾಟೀಲ, ಸಂಗಮೇಶ ಮುಶಿಗೇರಿ, ಶಂಕರಾವ್ ಈಳಗೇರ, ಸಾಗರ, ಚನ್ನು ಮಡಿವಾಳರ್, ನರಹರಿ ಪೂಜಾರ ಸ್ಥಳೀಯ ಪತ್ರಕರ್ತರು, ವಿವಿಧ ಪಕ್ಷಗಳ ಮುಖಂಡರು, ಚುನಾಯಿತ ಪ್ರತಿನಿಧಿಗಳು, ಅಪಾರ ಅಭಿಮಾನಿಗಳು ಭಾಗವಹಿಸಿದ್ದರು..!!