ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ :
ಕೊಪ್ಪಳ : ತಾವು ಕಲಿತ ಶಾಲೆಯಲ್ಲಿ ಶ್ರಮ ದಾನ ಮಾಡುವ ಮೂಲಕ ನೂತನ ಡಿಡಿಪಿಐ ಮುತ್ತುರಡ್ಡಿ ರಡ್ಡೇರ ನೂತನ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನು ವಿಶೇಷವಾಗಿ ಆಹ್ವಾನಿಸಿದ ಪ್ರಸಂಗ ಜರುಗಿತು..!
ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ ಡಿಡಿಪಿಐ ಶಾಲಾ ಮೈದಾನದಲ್ಲಿನ ಕಸವನ್ನು ಸಲಿಕೆಯಿಂದ ತೆಗೆಯುವ ಮೂಲಕ ಶ್ರಮ ದಾನ ಮಾಡಿದರು.
ಮಕ್ಕಳ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಿಸುವುದರ ಜೊತೆಗೆ ಶಾಲಾ ಮುಖ್ಯವಾಹಿನಿಗೆ ಕರೆತರಲು ಡಿಡಿಪಿಐ ಸೂಚನೆ ನೀಡಿದರು. ದಾಖಲಾತಿಯಂತೆ ಹಾಜರಾತಿ ಕಾಯ್ದುಕೊಳ್ಳಲು ಶಿಕ್ಷಕರಿಗೆ ಸಲಹೆ ನೀಡಿದರು. ಸ್ವಚ್ಛತೆ, ಆರೋಗ್ಯದ ಕಡೆ ಗಮನ ಹರಿಸಿ, ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವಂತೆ ಮನವರಿಕೆ ಮಾಡಿದರು. ಸಿಆರ್ ಪಿಗಳಾದ ಶರಣಗೌಡ ಗೌಡ್ರ, ಹೆಚ್,ಎಸ್,ಉಸ್ತಾದ್ ಹಾಗೂ ಶರಣಪ್ಪ ತುಮರಿಕೊಪ್ಪ ಮುಖ್ಯಗುರು ದೇವೇಂದ್ರಪ್ಪ ಕೆಲೂರು ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು..!!