ಮನೆ ಮಂಜೂರಿಗೆ ಶಾಸಕರಿಗೆ ಮನವಿ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಕೊಳಚೆ ನೀರಿನ ತೇವಾಂಶದಿಂದ ಮನೆ ಕಳೆದುಕೊಂಡ ಕುಟುಂಬ ಗ್ರಾಮೀಣ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸುವಂತೆ ಒತ್ತಾಯಿಸಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರಗೆ ಮನವಿ ಪತ್ರ ಸಲ್ಲಿಸಿದೆ..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಜಿ.ಗಂಗನಾಳ ಗ್ರಾಮದ ಎಸ್ಸಿ ಕಾಲೋನಿ ನಿವಾಸಿ ಹನುಮಂತಪ್ಪ ಗುಡದಪ್ಪ ಎಂಬುವರು ದಿನಾಂಕ-17-05-2022 ರಂದು ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಿಷ್ಟು, ಗ್ರಾಮದ ಎಲ್ಲಾ ಓಣಿಗಳ ಚರಂಡಿ ಕೊಳಚೆ ನೀರು ತಮ್ಮ ಕಾಲೋನಿ ಮೂಲಕ ಹರಿದು ಬರುತ್ತಿದೆ. ಮುಂದೆ ಸಾಗಲು ಒಳ ಹರಿವು ಇಲ್ಲದ ಕಾರಣ ಕೊಳಚೆ ನೀರಿನ ತೇವಾಂಶ ಹೆಚ್ಚಾಗಿ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ವಾಸಿಸಲು ಮನೆ ಇಲ್ಲದೇ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದೇವೆ. ಈ ಕುರಿತು ಗುಮಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಸ್ಪಂಧಿಸುತ್ತಿಲ್ಲ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ. ಕೊಳಚೆ ನೀರಿನಿಂದಾಗಿ ಕಾಲೋನಿ ಜನ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ. ಹಾಗಾಗಿ ಕಾಯಿಲೆಗಳಿಂದ ಮುಕ್ತಿ ಪಡೆಯಲು ಒಳಚರಂಡಿ ಮಂಜೂರು ಮಾಡಿಸಬೇಕು ಎಂದು ಮನವಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಎಸ್ಸಿ ಕಾಲೋನಿ ನಿವಾಸಿಗಳಾದ ಜಾಂಬವ ಯುವ ಸೇನೆ ಅಧ್ಯಕ್ಷ ಯಮನೂರ ಮೇಲಿನಮನಿ, ಪರಶುರಾಮ, ಮೈಬೂ, ಮುತ್ತಣ್ಣ, ಮರಿಯಪ್ಪ, ಹುಲಗಪ್ಪ, ಹನುಮಪ್ಪ, ಶಶಿಕುಮಾರ ಸೇರಿದಂತೆ. ಇನ್ನಿತರು ಹಾಜರಿದ್ದರು..!!