ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿ ವಿಜಯಲಕ್ಷ್ಮೀ ಸಿದ್ದು ಅಂಗಡಿ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ 625 ಅಂಕಗಳಿಗೆ 619 ಅಂಕಗಳನ್ನು ಪಡೆದು, (ಶೇ.99.04) ಅತ್ಯುತ್ತಮ ಸಾಧನೆಗೈದಿದ್ದಾಳೆ..!
ಶಾಲೆಗೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ ಗ್ರಾಮೀಣ ಭಾಗದವಳಾಗಿದ್ದು ವಿಶೇಷ. ಒಂದನೇ ತರಗತಿಯಿಂದ 5 ನೇ ತರಗತಿವರೆಗೆ ಸ್ವಗ್ರಾಮ ಕುಷ್ಟಗಿ ತಾಲೂಕಿನ ಹನುಮನಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದು. 6 ರಿಂದ 10 ನೇ ತರಗತಿವರೆಗೆ ಹೊಸಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಅಭ್ಯಾಸಗೈದಿದ್ದಾಳೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಪ್ರಾಚಾರ್ಯ ವಿ.ಬಿ.ಹನುಮಶೆಟ್ಟಿ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ವರ್ಗ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅವಿರತ ಶ್ರಮದ ಫಲದಿಂದ ಸಾಧನೆ ಮಾಡಲ ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಎಂಬ ಯಾವುದೇ ತರಹದ ಕೀಳರೀಮೆ ಇರಬಾರದು. ಸಾಧನೆಗೆ ಮುಖ್ಯವಾಗಿ ದೃಢವಾದ ನಿರ್ಧಾರ ಮುಖ್ಯವಾಗಿರುತ್ತದೆ ಎಂಬುದು ವಿಜಯಲಕ್ಷ್ಮೀಯ ಅಭಿಪ್ರಾಯವಾಗಿದೆ.
# ಮಗಳ ಅತ್ಯುತ್ತಮ ಸಾಧನೆ ಹೆಮ್ಮೆ ತಂದಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಅಭ್ಯಾಸ ಮಾಡುವವರಿಗೆ ಮಾದರಿಯಾಗಿದ್ದಾಳೆ ಎಂದರೆ ತಪ್ಪಾಗಲಾರದು.
# # ಸಿದ್ದು ರೊಟ್ಟಿ (ಅಂಗಡಿ),
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು, ಹನುಮನಾಳ.