ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಸಾಮೂಹಿಕವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಹತ್ತು ಜನರನ್ನು ಪೊಲೀಸರು ಬಂಧಿಸಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣಸಗೇರಿ ಗ್ರಾಮದಲ್ಲಿ (ದಿನಾಂಕ 21-05-2022 ರಂದು) ಜರುಗಿದೆ..!
ಗ್ರಾಮದ ದ್ಯಾಮವ್ವನ ಗುಡಿಯ ಮುಂದೆ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ, ಹುಲಪ್ಪ ತಂ ಬಸಪ್ಪ ಹೊಸಮನಿ, ಹನುಮಂತಪ್ಪ ತಂ. ಯಮನೂರಪ್ಪ ಬಲಕುಂದಿ, ರಾಮಣ ತಂ ಬಾಳಪ್ಪ ಗುಡೂರ, ಸಂಗಪ್ಪ ತಂ ದ್ಯಾಮಣ ಬೂದಿಹಾಳ, ಉಮೇಶ ತಂ ಕನಕಪ್ಪ ತಳವಾರ, ಹನುಮಂತ ತಂ ಬಸನಗೌಡ ಮಾಲೀಪಾಟೀಲ, ಬಸವರಾಜ ತಂ ನಿಂಗಪ್ಪ ಮೇಟಿ, ಬಸವರಾಜ ತಂ ತಿಮ್ಮಪ್ಪ ಬಲಕುಂದಿ, ಮುತ್ತಪ್ಪ ತಂ ಯಲಗುರದಪ್ಪ ಗೌಡರ, ಮೈಲಾರಪ್ಪ ತಂ ನಿಂಗಪ್ಪ ಬೂದಿಹಾಳ ಎಂಬುವರನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅವರ ಬಳಿ ಇದ್ದ 19,320 ರೂಪಾಯಿಗಳನ್ನು ಹಾಗೂ ಜೂಜಾಟದಲ್ಲಿ ಬಳಸಿದ್ದ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿ ಜಾಮೀನು ಮೇರೆಗೆ ಬಿಡುಗಡೆ ಗೊಳಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ..!!