‘ಯೂರಿಯಾ’ ಗೊಬ್ಬರದ ಬೆಲೆ 266 ರೂಪಾಯಿಗಳು ಮಾತ್ರ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರೈತರೇ.. ಎಚ್ಚರಿಕೆ ಇರಲಿ. 50 Kg ಯೂರಿಯಾ ಗೊಬ್ಬರದ ಅಧಿಕೃತ ಮಾರಾಟದ ಬೆಲೆ 266=00 ಇರುತ್ತದೆ. ಮಾರುಕಟ್ಟೆಯಲ್ಲಿ ಗೊಬ್ಬರ ಖರೀದಿಸುವಾಗ ಬೆಲೆ ಚೌಕಾಸಿ ಮಾಡಿರಿ ಎಂಬ ಸಂದೇಶವನ್ನು ಜಿಲ್ಲೆಯ ಕುಷ್ಟಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಅವರು ನೀಡಿದ್ದಾರೆ..!

ಯೂರಿಯಾ ಸೇರಿದಂತೆ ಇನ್ನೂಳಿದ ಗೊಬ್ಬರದ ದರಗಳ ಅಧಿಕೃತ ಮಾಹಿತಿ ಈ ಕೆಳಗಿನಂತಿವೆ.

ಕೃತಕ ಅಭಾವ ಸೃಷ್ಟಿ : ಮಾರುಕಟ್ಟೆಯಲ್ಲಿನ ಕೆಲ ವ್ಯಾಪಾರಸ್ಥರು, ಕೃತಕ ಅಭಾವ ಸೃಷ್ಟಿಸುವ ಮೂಲಕ ಮಾರಾಟ ಮಾಡಬೇಕಾಗಿದ್ದ ನಿಗದಿತ ಮಾರುಕಟ್ಟೆ ಬೆಲೆಗಿಂತ ಅಧಿಕ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಸರಕಾರ ನಿಗದಿಪಡಿಸಿದ ಅಧಿಕೃತ ಮಾರಾಟ ಬೆಲೆಗೆ ಗೊಬ್ಬರ ಸೇರಿದಂತೆ ಕ್ರಿಮಿನಾಶಕ ಹಾಗೂ ಬೀಜಗಳನ್ನು ಖರೀದಿಸಲು “ಕೃಷಿ ಪ್ರಿಯ” ಪತ್ರಿಕೆ ಸಲಹೆ ನೀಡುತ್ತಿದೆ. ಅಧಿಕೃತ ಮಾರಾಟದ ಪರವಾನಿಗೆ ಪಡೆದ ಅಂಗಡಿಗಳಲ್ಲಿ ನಿಗದಿತ ದರಕ್ಕೆ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಲು ನಮ್ಮದೊಂದು ಮನವಿ..!!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ :

ಮೊ ನಂ : 82779 32109