ಪಠ್ಯ ಪುಸ್ತಕಗಳು ಸದುಪಯೋಗವಾಗಲಿ : ಕಾಂಬ್ಳೆ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ ಅವರು ವಿದ್ಯಾರ್ಥಿನಿಯರಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ಮೂಲಕ ‘ಪಠ್ಯಪುಸ್ತಕಗಳ ವಿತರಣಾ ಕಾರ್ಯಕ್ರಮಕ್ಕೆ’ ಚಾಲನೆ ನೀಡಿದರು..!

ಮಕ್ಕಳು ಪಠ್ಯ ಪುಸ್ತಕಗಳ ಸದುಪಯೋಗ ಪಡಿಸಿಕೊಳ್ಳಬೇಕು. ಎಲ್ಲ ಮಕ್ಕಳಿಗೂ ಪಠ್ಯ ಪುಸ್ತಕಗಳು ತಲುಪವಂತೆ ಜಾಗೃತಿವಹಿಸುವಂತೆ ಸಿಬ್ಬಂದಿಗೆ ಬಿಇಓ ಸಲಹೆ ನೀಡಿದರು. ಪಠ್ಯಪುಸ್ತಕ ವಿತರಣಾ ನೋಡಲ್ ಅಧಿಕಾರಿ ತಿಮಣ್ಣ ಹಿರೇಹೊಳಿ, ವಿಷಯ ನಿರ್ವಾಹಕ ಪ್ರಶಾಂತ್ ಹಾಗೂ ಪಠ್ಯಪುಸ್ತಕ ವಿತರಣಾ ಸಹಾಯಕ ಭೀಮಪ್ಪ ಗಡಾದ ಹಾಗೂ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗಪ್ಪ ಬಿಳಿಯಪ್ಪನವರ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು..!!