ಮರಳು ಸಾಗಾಣಿಕೆ ಟಿಪ್ಪರ್ ಜಪ್ತಿ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಪರವಾನಗಿ ಇಲ್ಲದೇ ಮರಳನ್ನು ಅಕ್ರಮವಾಗಿ ತುಂಬಿಕೊಂಡು ಸಾಗಿಸುತ್ತಿದ್ದ ಟಿಪ್ಪರ್ ಅನ್ನು ಜಿಲ್ಲೆಯ ಕುಷ್ಟಗಿ ಪೊಲೀಸರು ಮರಳು ಸಮೇತ ಟಿಪ್ಪರ್ ಜಪ್ತಿ ಮಾಡಿಕೊಂಡಿದ್ದಾರೆ..!

ಜಿಲ್ಲೆಯ ಕುಷ್ಟಗಿ ತಾಲೂಕಿನ ಕೇಸೂರು ರಸ್ತೆಯಿಂದ ಮುದೇನೂರು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಮರಳು ತುಂಬಿಕೊಂಡು ಸಂಚರಿಸುತ್ತಿದ್ದ ಭಾರತ ಬೆಂಜ್ ಕಂಪನಿಯ ಟಿಪ್ಪರ್ (ಕೆ.ಎ.26 ಬಿ.3058) ಅನ್ನು ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ದಾಳಿ ನಡೆಸಿದೆ. ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಟಿಪ್ಪರ್ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ( ಗುನ್ನೆ ನಂ 100/2022, ಐಪಿಸಿ ಕಲಂ 379 ರ) ತನಿಖೆ ಕೈಗೊಂಡಿದ್ದಾರೆ..!!