ಬೆನ್ನುಹುರಿ ಅಪಘಾತವುಳ್ಳ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ ಹಾಗೂ ವ್ಯಾಯಾಮ ಚಿಕಿತ್ಸಾ ಶಿಬಿರ

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಷ್ಟ್ರೀಯ ಹೆದ್ದಾರಿ (50) ಹೊಸೂರ ಕ್ರಾಸ್ ಬಳಿಯಲ್ಲಿರುವ ‘ಸಾಮರ್ಥ್ಯ’ ಬೆನ್ನುಹುರಿ ಅಪಘಾತ ವ್ಯಕ್ತಿಗಳ ಪುನಶ್ಚೇತನ ಕೇಂದ್ರದಲ್ಲಿ ಬೆಂಗಳೂರಿನ ದಿ ಅಸೋಸಿಯೇಷನ್ ಆಫ್ ಪೀಪಲ್ ಡಿಸೆಬಿಲಿಟಿ (ಎಪಿಡಿ) ಇವರ ನೇತೃತ್ವದಲ್ಲಿ  ಬೆನ್ನುಹುರಿ ಅಫಘಾತಗಳ ವ್ಯಕ್ತಿಗಳ ಆರೋಗ್ಯ ತಪಾಸಣಾ ಹಾಗೂ ವ್ಯಾಯಾಮ ಚಿಕಿತ್ಸಾ ಶಿಬಿರದ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು..!

ಖ್ಯಾತ ಪಿಜಿಯೋಥೆರೀಪಿಸ್ಟ್ ಆದೀನ್ ಡೇವಿಡ್ ಮಾತನಾಡಿ, ಬೆನ್ನುಹುರಿ ಅಂದರೇನು..? ಅದರ ಮಹತ್ವ , ಅದರ ರಕ್ಷಣೆ, ಅದರಿಂದಾಗುವ ಎರಡನೇ ಗಾಯಗಳು, ಚೈತನ್ಯ, ಗಾಲಿ ಕುರ್ಚಿ ಬಳಕೆ, ಲಾಭಗಳ ಕುರಿತು ಶಿಬಿರಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸಾಮರ್ಥ್ಯ ಸಂಸ್ಥೆಯ ಇನ್ನೊರ್ವ ಖ್ಯಾತ ಪಿಜಿಯೋಥೇರಿಪಿಸ್ಟ್ ಮೆಹಬೂಬ್ ಮಾತನಾಡಿ, ಸಾಮರ್ಥ್ಯ ಬೆನ್ನುಹುರಿ ಚಿಕಿತ್ಸಾ ಕೇಂದ್ರದಲ್ಲಿರುವ ಸೌಲಭ್ಯಗಳು, ಬೆನ್ನುಹುರಿ ಅಫಘಾತ ಬಳಿಕ ಆಗಬಹುದಾದ ವಿಭಿನ್ನ ಚಿಕಿತ್ಸೆ ಇತ್ಯಾದಿ ಕುರಿತು ತಿಳುವಳಿಕೆ ನೀಡಿದರು. ಅಲ್ಲದೆ, (ಗರ್ವ ಸೇ ಆಫೀಸರ್) ಪ್ರವೀಣ ಮಾತನಾಡಿ, ಬೆನ್ನುಹುರಿ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳಿಗೆ ರಾಜ್ಯ ಹಾಗೂ ಕೆಂದ್ರ ಸರಕಾರಗಳ ಸೌಲಭ್ಯಗಳ ಕುರಿತು, ಪ್ರಾಸ್ತಾವಿಕ ಭಾಷಣದಲ್ಲಿ ಮಾಹಿತಿ ನೀಡಿದರು. ಸಂಗಣ್ಣ , ರಮೇಶ ಹಾಗೂ ಈರಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.