ಪತ್ರಕರ್ತರ ಸುದ್ದಿಗಳು ರದ್ದಿಯಾಗಬಾರದು : ಗವಿಶ್ರೀಗಳು

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಪತ್ರಕರ್ತರು ಸತ್ಯ ನಿಷ್ಠೆಯಿಂದರಬೇಕು. ಪತ್ರಕರ್ತರು ಬರೆದ ಸುದ್ದಿಗಳು ದಾಖಲೆ ವಸ್ತುಗಳಾಗಬೇಕೆ ಹೊರತು ಸುದ್ದಿಗಳು ರದ್ದಿಯಾಗಬಾರದು ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಭಿಪ್ರಾಯವ್ಯಕ್ತಪಡಿಸಿದರು.

ಜಿಲ್ಲೆಯ ಗಂಗಾವತಿ ನಗರದ ಅಮರಜ್ಯೋತಿ ಕನ್ವೆನ್ಷನ್ ಹಾಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಗಂಗಾವತಿ ತಾಲೂಕಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ನಿಸರ್ಗದ ಸಾಮರ್ಥ್ಯವನ್ನು ಯಾರಿಗೂ ಅಳೆಯಲು ಸಾಧ್ಯವಿಲ್ಲ. ಆದರೆ, ಇಂತಹ ಸಾಮರ್ಥ್ಯ ಪತ್ರಕರ್ತರಿಗೆ ಇದೆ ಎಂದು ಶ್ರೀಗಳು ಹೇಳಿದರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತ ವೃತ್ತಿ ಜವಾಬ್ದಾರಿ, ಘನತೆ, ಗೌರವ ಹಾಗೂ ಪ್ರೀತಿ ವಿಶ್ವಾಸದ ವೃತ್ತಿಯಾಗಿದೆ. ಸುಳ್ಳು ಸುದ್ದಿಗಳ ನಡುವೆ ಉತ್ತಮ ಹಾಗೂ ವಸ್ತು ನಿಷ್ಟ ಸುದ್ದಿಗಳನ್ನು ಆಯ್ಕೆಮಾಡುವುದು ಪತ್ರಕರ್ತರ ಜಾಣತನವೆಂದರು. ಪತ್ರಕರ್ತ ವೃತ್ತಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ನೆರೆದಿದ್ದ ಪತ್ರಕರ್ತರಿಗೆ ಸಲಹೆ ನೀಡಿದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮುನಿರಾಬಾದ್ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಮಾಜಿ ಶಾಸಕ ಜಿ.ವೀರಪ್ಪ, ನೆಕ್ಕಂಟಿ ಸೂರಿಬಾಬು, ಜೋಗದ ನಾರಾಯಣಪ್ಪ ನಾಯಕ, ವೈದ್ಯಾಧಿಕಾರಿ ಈಶ್ವರ ಸವಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಸಾಧಿಕ್ ಅಲಿ, ವಿಶೇಷ ಅಹ್ವಾನಿತ ಹೆಚ್.ಎಸ್.ಹರೀಶ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜಿ.ಎಸ್.ಗೋನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ವಾಯ್, ಗಂಗಾವತಿ ತಾಲೂಕಾ ಆಧ್ಯಕ್ಷ ನಾಗರಾಜ ಇಂಗಳಗಿ ಸೇರಿದಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು. ಕಕಾಪ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗೂಡ್ಲಾನೂರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಪ್ರಮಾಣ ವಚನ : ನೂತನವಾಗಿ ಆಯ್ಕೆಯಾದ (2022-2025 ಅವಧಿ)  ಕ ಕಾ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಮಾಣ ವಚನ ಬೋಧಿಸಿದರು.