ಕೊರೋನಾದಿಂದ ಮೃತ ಕುಟುಂಬಗಳಿಗೆ ಪರಿಶೀಲನೆ ಬಳಿಕ ಹಣ ಬಿಡುಗಡೆ : ಜಿಲ್ಲಾಧಿಕಾರಿ

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ 72 ಜನ ಕೊರೋನಾದಿಂದ ಮೃತ ಕುಟುಂಬಗಳಿಗೆ ಪರಿಶೀಲನೆ ಬಳಿಕ ಪರಿಹಾರ ಬಿಡುಗಡೆಗೆ ಮುಂದಾಗುವುದಾಗಿ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ್ ತಿಳಿಸಿದರು.

ಜಿಲ್ಲೆಯ ಕುಷ್ಟಗಿ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ತಾಲೂಕಿನಲ್ಲಿ ಒಟ್ಟು ಕೊರೋನಾದಿಂದ 112 ಜನರು ಬಲಿಯಾಗಿದ್ದಾರೆ. ಆದರೆ, ಇಲ್ಲಿಯವರೆಗೂ 42 ಜನ ಮೃತ ಕುಟುಂಬಗಳಿಗೆ ಮಾತ್ರ ಪರಿಹಾರವಾಗಿ 150,000=00 ಹಣ ಬಿಡುಗಡೆಯಾಗಿದೆ. ಆದರೆ, 70 ಮೃತ ಕುಟುಂಬಗಳಿಗೆ ಜೀವನ ಪರಿಹಾರ ವಿತರಣೆಯಾಗಿಲ್ಲವೆಂಬ ಪತ್ರಕರ್ತರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ಉತ್ತರಿಸಿದ್ದಿಷ್ಟು , ಮೊದಲ ಕಂತಿನಲ್ಲಿ ಮೃತ ಕುಟುಂಬಗಳಿಗೆ ರಾಜ್ಯ ಸರಕಾರದ 1 ಲಕ್ಷ ರೂಪಾಯಿಗಳು ಹಾಗೂ ಕೇಂದ್ರ ಸರಕಾರ 50 ಸಾವಿರಗಳನ್ನು ಪರಿಹಾರವಾಗಿ ವಿತರಿಸಲಾಗಿದೆ. ಆದರೆ, ಎರಡನೇ ಹಂತವಾಗಿ ವಿತರಿಸಬೇಕಾದ ಪರಿಹಾರಕ್ಕಾಗಿ ಇತರೆ ಕಾಯಿಲೆ ಜೊತೆಗೆ ಸ್ಪಷ್ಟವಾದ ಕೊರೋನಾ ವೈರಸ್ ನಿಂದಲೇ ಮೃತಪಟ್ಟ ಬಗ್ಗೆ ದೃಢಿಕರಿಸುವ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಿತಿ ನಿರ್ಣಯಿಸಲಾಗುತ್ತಿದೆ. ಸಮಿತಿ ನೀಡುವ ಪಟ್ಟಿ ಆದಾರರದ ಮೇಲೆ ಪರಿಹಾರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ತಹಸೀಲ್ದಾರ ಎಂ.ಸಿದ್ಧೇಶ, ಉಪ ತಹಸೀಲ್ದಾರ ಮುರಳಿಧರ ಸೇರಿದಂತೆ ಇನ್ನಿತರ ಸಿಬ್ಬಂದಿ ಉಪಸ್ಥಿತರಿದ್ದರು.