ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ಆರ್.ಸಿ.ಸಿ ಮನೆವೊಂದು ಬಿರುಕುಬಿಟ್ಟಿರುವ ಘಟನೆ ಸಾಯಂಕಾಲ ಜರುಗಿದೆ..!
ಮುದಿಯಪ್ಪ ಭೀಮಪ್ಪ ಹಾನಾಪೂರು ಎಂಬುವರಿಗೆ ಸೇರಿದ ಆರ್.ಸಿ.ಸಿ ಮನೆಯ ಕುಂಬಿಗೆ ಸಿಡಿಲು ಬಡಿದ ಪರಿಣಾಮ ಅಲ್ಲಲ್ಲಿ ಕ್ರ್ಯಾಕ್ ಕಾಣಿಸಿಕೊಂಡಿದೆ. ಸುಮಾರು 10 ರಿಂದ 15 ಲಕ್ಷ ರೂಪಾಯಿಗಳ ಮೌಲ್ಯದ ಮನೆ ಬಿರುಕುನಿಂದ ಹಾನಿಗೊಳಗಾಗಿದೆ. ಈ ಮನೆ ಸಮೀಪದ ನೀಲಮ್ಮ ಕೆಂಗಾರಿ ಎಂಬುವರಿಗೆ ಸೇರಿದ ತೆಂಗಿನ ಗಿಡವೊಂದು ಸಿಡಿಲಿನಿಂದ ಸುಟ್ಟು ಹೋಗಿದೆ. ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುವಂತೆ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಭೇಟಿ : ಘಟನಾ ಸ್ಥಳಕ್ಕೆ ನಿಲೋಗಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜುಳಾ ಭೀಮನಗೌಡ ಪಾಟೀಲ್ ಸೇರಿದಂತೆ ಗ್ರಾಪಂ ಸದಸ್ಯರು ಮುಖಂಡರ ತಂಡ ಭೇಟಿ ನೀಡಿದೆ. ಸೂಕ್ತ ರೀತಿಯ ಪರಿಹಾರ ನೀಡುವುದಕ್ಕೆ ಸರಕಾರಕ್ಕೆ ಒತ್ತಾಯಪಡಿಸಲಾಗುವುದು ಎಂದು ಮಂಜುಳಾ ಭೀಮನಗೌಡ ಪಾಟೀಲ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ..!!
ನೈಸರ್ಗಿಕ ವಿದ್ಯಮಾನಗಳ ನೈಜ ಅನಾವರಣ
ಜ್ಞಾನದ ಹೂರಣ
ಕಲಿಕಾ ಆಯಾಮದ ಒಂದು ಚರಣ
ಪ್ರತಿ ಬಿಂಬ ಈ ವರದಿ
ಮೌಲ್ಯಯುತ.