ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಪೊಲೀಸ್ ವೃತ್ತಿ ಜೊತೆಗೆ ಎ.ಎಸ್.ಐ ಮಹೇಶ ಹಿರೇಮಠ ಅವರ ಸಮಾಜಮುಖಿಯಾಗಿರುವ ಕಾರ್ಯ ಬಹಳಷ್ಟು ಶ್ಲಾಘನೀಯವಾಗಿರುವಂತದ್ದು ಎಂದು ನಿವೃತ್ತ ಪೊಲೀಸ್ ಹಾಗೂ ಬಿಜೆಪಿ ಮುಖಂಡ ಭೀಮನಗೌಡ ಪಾಟೀಲ್ ಅಭಿಪ್ರಾಯವ್ಯಕ್ತಪಡಿಸಿದರು.
ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಸಮೀಪದ ರಾಂಪೂರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ವಯೋನಿವೃತ್ತಿ ಹೊಂದಿದ ಎ.ಎಸ್.ಐ ಮಹೇಶ ಹಿರೇಮಠ ಅವರಿಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೃತ್ತಿ ಜೊತೆ ಜೊತೆಗೆ ಜನರ ಮಧ್ಯದಲ್ಲಿ ಹಿರೇಮಠ ಅವರು ಬಹಳಷ್ಟು ಬಾಂಧವ್ಯ ಹೊಂದುವ ಮೂಲಕ ಸೇವೆ ಸಲ್ಲಿಸಿದ್ದು ಅಪರೂಪದ್ದಾಗಿದೆ. ಕೆಲವು ವರ್ಷಗಳಲ್ಲಿಯೇ ಈ ಭಾಗದಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದರು. ಅವರ ಸೇವೆ ಪೊಲೀಸ್ ಇಲಾಖೆಗೆ ಮಾದರಿಯಾಗಿದೆ ಎಂದರು. ನಿವೃತ್ತ ಸೈನಿಕ ಹನುಮಂತಪ್ಪ ದೊಡ್ಡತೆಲಿ, ಅಗ್ನಿಶಾಮಕ ದಳದ ತಾಲೂಕಾಧಿಕಾರಿ ರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ ಕುರಿ, ಶೇಖಪ್ಪ ಅಕ್ಕರಗಲ್, ವ್ಯವಸಾಯ ಸಹಕಾರಿ ಬ್ಯಾಂಕ್ ನಿರ್ದೇಶಕ ಶೇಖರಪ್ಪ ಅಕ್ಕರಗಲ್, ಮುಖಂಡರಾದ ದಾನಪ್ಪ ತೂಗುಣಸಿ, ಬಸವರಾಜ ದೊಡ್ಡತೆಲಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ನಿವೃತ್ತಿ ಹೊಂದಿದ ಎ.ಎಸ್.ಐ ಮಹೇಶ ಹಿರೇಮಠ ಅವರಿಗೆ ಗ್ರಾಮಸ್ಥರು ಸನ್ಮಾನಿಸಿ ಸತ್ಕರಿಸಿದರು.