ಚಳಗೇರಿಯಲ್ಲಿ ಯೋಗ ದಿನದಂದು ಸಸಿ ನಾಟಿ

 

 

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ (ಕುಷ್ಟಗಿ) : ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರುಗಳು ಯೋಗ ಹಾಗೂ ಸಸಿ ನಾಟಿ ಮಾಡುವ ಮೂಲಕ ವಿಶೇಷವಾಗಿ ಯೋಗ ದಿನ ಆಚರಿಸಿದರು..!
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಂತೇಶ್ ಮಹಾದೇವಪ್ಪ ಹಡಪದ್ ಹಾಗೂ ಉಪಾಧ್ಯಕ್ಷೆ ಶಾಂತವ್ವ ಲಕ್ಷ್ಮಣ ಜಾಲಿ ಇರ್ವರು ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ ಆವರಣ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿ ನೆಟ್ಟು ನೀರೆರೆದರು ಜತೆಗೆ ಇನ್ನೂರಕ್ಕೂ ಅಧಿಕ ಸಸಿಗಳನ್ನು ಗ್ರಾಮಸ್ಥರಿಗೆ ಹಂಚಿಕೆ ಮಾಡಿದರು. ಅಷ್ಟೇ ಅಲ್ಲದೇ ಶಾಲಾ ಆವರಣದಲ್ಲಿ ನಡೆದ ವಿಶ್ವ ಯೋಗ ದಿನದ ಅಂಗವಾಗಿ ಯೋಗ ಗುರು ರವಿಕುಮಾರ್ ಕೊರಿಸೆಟ್ಟರ್ ಅವರ ಮುಂದಾಳತ್ವದಲ್ಲಿ ಮಕ್ಕಳು, ಗ್ರಾಮಸ್ಥರೊಂದಿಗೆ ಸರ್ವ ಸದಸ್ಯರುಗಳು ಸಾಮೂಹಿಕವಾಗಿ ಯೋಗ ಮಾಡಿರುವುದು ಅಂತರಾಷ್ಟ್ರೀಯ ಯೋಗದಿನ ಆಚರಣೆಗೆ ಸಾಕ್ಷಿಯಾಗಿತು.
ಸದಸ್ಯರುಗಳಾದ ಶರಣಬಸವ ಗಾಡಗೋಳಿ, ನಾಗರಾಜ್ ಹಿರೇಮಠ, ಶರಣಪ್ಪ ಶೆಟ್ಟರ್, ರುದ್ರಯ್ಯ ಸೊಪ್ಪಿನಮಠ, ಶರಣಪ್ಪ ಕೋಟಿ, ಮ್ಯಾಗಿನ ಶರಣಮ್ಮ, ಚಂದ ಲಿಂಗಪ್ಪ ಮಾದರ್, ಹುಲ್ಲಪ್ಪ ವಡ್ಡರ್, ಚಂದ್ರಶೇಖರ್ ಕತ್ತಿ, ವೀರಯ್ಯ ಮಸ್ಕಿಮಠ, ಪ್ರಕಾಶ್ ಗಾಣಿಗೇರ್ ಹಾಗೂ ಬಸವರಾಜ್ ಭಾಗ್ಯದ, ಅನಿಲ್ ಕುಮಾರ್ ಮೈನಳ್ಳಿ, ಪರಿಮಳ ಎಸ್ ಶೆಟ್ಟರ್, ಇಂದ್ರಮ್ಮ ಬಾವಿಕಟ್ಟಿ, ಮಾನಪ್ಪ ಬಡಿಗೇರ, ಶರಣಪ್ಪ ಟಿಪಿ, ಮಂಜುನಾಥ್ ಕಲಿಕೇರಿ, ಸಂಗಪ್ಪ ಕಟ್ಟಿಮನಿ, ಮಾಲಿಂಗೇಶ್ವರ ಹಡಪದ್, ಪಿಡಿಒ ಬಸವರಾಜ್ ಸಂಕನಾಳ ಹಾಗೂ ಸಿಬ್ಬಂದಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಹನುಮವ್ವ ಯಲ್ಲಪ್ಪ ಗಾಡಗೋಳಿ ಹಾಗೂ ಸಹ ಶಿಕ್ಷಕರು ಶಾಲೆಯ ಮಕ್ಕಳು ಊರಿನ ಗುರುಹಿರಿಯರು ಹಾಜರಿದ್ದರು..!!