ವಂತಿಗೆ ಹಣ ಪಾವತಿಗೆ ವಿರೋಧಿಸಿ ಬಿಇಓ ಅವರಿಗೆ ಶಿಕ್ಷಕರಿಂದ ಮನವಿ

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇಲ್ಲಿಯವರೆಗೂ ಪಾವತಿಯಾಗುತ್ತಿದ್ದ ‘ವಂತಿಗೆ ಹಣ’ ತಡೆಯುವಂತೆ ಒತ್ತಾಯಿಸಿ 6 ರಿಂದ 8 ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಲಾಯಿತು..!

6 ರಿಂದ 8 ತರಗತಿವರೆಗಿನ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘವು ಪ್ರತ್ಯೇಕವಾಗಿದ್ದರ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪ್ರತಿ ವರ್ಷ ಆಗುತ್ತಿದ್ದ ವಂತಿಗೆ 200 ರೂಪಾಯಿಗಳ ಪಾವತಿಗೆ ಶಿಕ್ಷಕರು ವಿರೋಧಿಸಿದ್ದಾರೆ. ಪಾವತಿಯಾಗುತ್ತಿದ್ದ ವಂತಿಗೆ ಹಣವನ್ನು ತಡೆಯುವಂತೆ ಶಿಕ್ಷಕರು ಇಲಾಖೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕರ್ನಾಟಕ ರಾಜ್ಯ (6-8) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಷ್ಟಗಿ ತಾಲೂಕಾ ಘಟಕದ ಅಧ್ಯಕ್ಷ ಸುಬಾನಸಾಬ್ ನಧಾಪ್, ಸದಸ್ಯರಾದ ಅಮರೇಶ ಹಿರೇಮಠ, ಅಮರಯ್ಯ ಹಿರೇಮಠ, ಗ್ಯಾನಪ್ಪ ರಾಂಪೂರು, ಶಂಕ್ರಪ್ಪ ತೋಟದ ಸೇರಿದಂತೆ ಶಿಕ್ಷಕರು ಕಚೇರಿ ಅಧೀಕ್ಷಕ ಸೂರ್ಯನಾರಾಯಣ ಅಕ್ಕಸಾಲಿಗ ಅವರಿಗೆ ಮನವಿ ಸಲ್ಲಿಸಿದರು..!!