ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು

 

 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊನಾಪೂರ ಹಾಗೂ ಪರಮನಟ್ಟಿ ಗ್ರಾಮಗಳಿಗೆ ಬಸ್ ಸಂಚಾರಕ್ಕಾಗಿ ಒತ್ತಾಯಿಸಿ ಬಾದಿಮನಾಳ ಕ್ರಾಸ್ ನಲ್ಲಿ ಶಾಲಾ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ ಜರುಗಿತು..!

ಶಾಲಾ ಸಮಯಕ್ಕೆ ಬೆಳಿಗ್ಗೆ ಹಾಗೂ ಸಾಯಂಕಾಲ ಕೊನಾಪೂರು ಹಾಗೂ ಪರಮನಟ್ಟಿ ಗ್ರಾಮಗಳಿಗೆ ಬಸ್ ಸಂಚರಿಸಬೇಕೆಂದು ಒತ್ತಾಯಿಸಿ, ಕೊನಾಪೂರು ಗ್ರಾಮದ ವಿದ್ಯಾರ್ಥಿಗಳು ಬಸ್ ತಡೆದು, ಬಸ್ ಸಂಚಾರಕ್ಕೆ ಒತ್ತಾಯಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಕೊನಾಪೂರು ಗ್ರಾಮಕ್ಕೆ ಬಸ್ ಬಿಡುವರೆಗೂ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಆಗ್ರಹಪಡಿಸಿದರು. ನಿತ್ಯ ಮೂರು ಕಿ.ಮೀ ನಷ್ಟು ನಡೆದು ಶಾಲೆಗೆ ತೆರಳುವುದನ್ನು ತಪ್ಪಿಸುವಂತೆ ವಿದ್ಯಾರ್ಥಿಗಳು ಪರಿಪರಿಯಾಗಿ ಬೇಡಿಕೊಂಡರು. ಗ್ರಾಮಕ್ಕೆ ಬಸ್ ಸಂಚರಿಸಲು ಒತ್ತಾಯಿಸಿ ಕಳೆದ ವರ್ಷ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು..!!