ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮ ಪಂಚಾಯತಿಯ ಕಾರ್ಮಿಕನೊಬ್ಬ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಮಾಡುತ್ತಿದ್ದಾಗ ಸಾವನ್ನಪ್ಪಿದ ಘಟನೆ ಜರುಗಿದೆ..!
ಮಾಲಗಿತ್ತಿ ಗ್ರಾಮದ ಯಮನೂರಪ್ಪ ಹನುಮಪ್ಪ ಗುರಿಕಾರ (52) (ಜಾಬ್ ಕಾರ್ಡ ನಂಬರ್ 360) ಸಾವನ್ನಪ್ಪಿದ ನತದೃಷ್ಟ ಕಾರ್ಮಿಕ.
ಈಗಾಗಲೇ 38 ಮಾನವ ದಿನಗಳ ಕಾಲ ಪಂಚಾಯಿತಿಯವರು ಕೂಲಿ ನೀಡಿದ್ದರು ಎಂದು ತಿಳಿದುಬಂದಿದೆ.
ಭೇಟಿ : ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ತಳ್ಳಿಹಾಳ, ಖಾತ್ರಿ ಯೋಜನೆಯ ಎಡಿ ವಿಶ್ವನಾಥ ರಾಠೋಡ, ಪಿಡಿಓ ನಿಂಗಪ್ಪ ಬಂಡರಗಲ್, ಮಾಜಿ ಅಧ್ಯಕ್ಷ ರಾಘವೇಂದ್ರ ರಾಜೂರು, ಸದಸ್ಯರಾದ ಶಿವನಗೌಡ ಪಾಟೀಲ, ಶರಣಗೌಡ ಪಾಟೀಲ್, ಪರಸಪ್ಪ ತೆವರನ್ನವರ, ನಾಗಪ್ಪ ತೆವರನ್ನವರ ಸೇರಿದಂತೆ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮೌನಾಚರಣೆ : ಕಾರ್ಮಿಕ ಮೃತ ಸುದ್ದಿ ತಿಳಿದ ಹನುಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ನೂರಾರು ಜನ ಕಾರ್ಮಿಕರು ಎರಡು ನಿಮಿಷಗಳ ಕಾಲ ಕೆಲಸದಲ್ಲಿಯೇ ಎರಡು ನಿಮಿಷಗಳ ಕಾಲ ಮೌನಾಚರಣೆ ಆಚರಿಸುವ ಮೂಲಕ ಮೃತನ ಆತ್ಮಕ್ಕೆ ಶಾಂತಿ ಕೋರಿದರು. ಅಲ್ಲದೆ, ಕುಟುಂಬಸ್ಥರು ಸೇರಿದಂತೆ ನೂರಾರು ಜನ ಕಾರ್ಮಿಕರು ಮೃತನ ಕುಟುಂಬಕ್ಕೆ ಸೂಕ್ತ ರೀತಿಯ ಪರಿಹಾರ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ..!!

