ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸಮೀಪದ ಗೋರೆಬಿಹಾಳ ಕ್ರಾಸ್ ಬಳಿ ಬೈಕ್ ಸವಾರ ಆಯ ತಪ್ಪಿ ಬಿದ್ದ ಹಿನ್ನಲೆಯಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜರುಗಿದೆ..!
ಮೃತ ವ್ಯಕ್ತಿ ಕುಷ್ಟಗಿ ತಾಲೂಕಿನ ತುಗ್ಗಲಡೋಣಿ ಗ್ರಾಮದ (ಕಟ್ಟಡ ಕಾರ್ಮಿಕ) ಲಾಲಸಾಬ್ ಯಮನೂರಸಾಬ್ ಕೋಟೆಪ್ಪನವರ್ (28) ಎಂದು ತಿಳಿದುಬಂದಿದೆ. ಅಪಘಾತಕ್ಕೆ ಪಕ್ಕಾ ಕಾರಣ ತಿಳಿದು ಬಂದಿಲ್ಲ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!!
