ಹನುಮನಾಳ ಹೋಬಳಿಯಲ್ಲಿಯೇ ಒಂದೇ ಒಂದು ವಸತಿ ಶಾಲೆ ಇಲ್ಲ..!?

 


 

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಗಡಿ ಹೋಬಳಿಯಾಗಿರುವ ಹನುಮನಾಳ ಭಾಗದಲ್ಲಿ ಒಂದೇ ಒಂದು ವಸತಿ ಶಾಲೆ ಇಲ್ಲಿಯವರೆಗೂ ಸ್ಥಾಪನೆಯಾಗಿಲ್ಲ..!?

ಹೈದ್ರಾಬಾದ್ ಕರ್ನಾಟಕದಲ್ಲಿಯೇ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ಕುಷ್ಟಗಿ. ಇಂತಹ ತಾಲೂಕಿನ, ಜಿಲ್ಲೆಯ ಹಾಗೂ ಗುಲಬರ್ಗಾ ವಿಭಾಗದ ಗಡಿ ಭಾಗವಾಗಿರುವ ಈ ಹೋಬಳಿ ಪ್ರದೇಶದಲ್ಲಿ ವಸತಿ ಶಾಲೆವೊಂದನ್ನು ಸ್ಥಾಪನೆಗೆ ಮುಂದಾಗದಿರುವುದು ಶೈಕ್ಷಣಿಕವಾಗಿ ಈ ಭಾಗ ಅಭಿವೃದ್ಧಿ ಹಿನ್ನಡೆಗೆ ಇದು ಒಂದು ಮುಖ್ಯ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹನುಮಸಾಗರದಲ್ಲಿರುವ ಕಸ್ತೂರಬಾ ಬಾಲಕೀಯರ ವಸತಿ ಶಾಲೆ ಹಾಗೂ ಸಮೀಪದ ಕಾಟಾಪೂರು ಮೊರಾರ್ಜಿ ದೇಸಾಯಿ ವಸತಿ ಶಾಲೆವೊಂದನ್ನು ಬಿಟ್ಟರೆ ತಾಲೂಕಾ ಕೇಂದ್ರದ ಕೊನೆವರೆಗೂ ಒಂದು ಯಾವುದೇ ತರಹದ ವಸತಿ ಶಾಲೆ ಇಲ್ಲದಿರುವುದು ವಿಪರ್ಯಾಸದ ಸಂಗತಿ. 50 ರಿಂದ 60 ಗ್ರಾಮಗಳ ಮಧ್ಯದಲ್ಲಿರುವ ಹೋಬಳಿ ಕೇಂದ್ರ ಸ್ಥಾನದಲ್ಲಾಗಲಿ ಅಥವಾ ಸುತ್ತಮುತ್ತಲಿನ ಗ್ರಾಮಗಳಲ್ಲಾದರೂ ಇನ್ನೂವರೆಗೂ ಒಂದು ವಸತಿ ಶಾಲೆ ಏತಕ್ಕೆ ತೆರೆದಿಲ್ಲ ಎಂಬ ‘ಅಣಕು’ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆಲ್ಲಾ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯೂ ಮೂಲವಾಗಿದೆ. ಇತ್ತೀಚಿಗೆ ತುಗ್ಗಲಡೋಣಿ ಗ್ರಾಮದಲ್ಲಿ ಜರುಗಿದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ” ಎಂಬ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ವಸತಿ ಶಾಲೆಗಳನ್ನು ಈ ಭಾಗದಲ್ಲಿ ತೆರೆಯುವಂತೆ ಒತ್ತಾಯಪಡಿಸಿದ್ದನ್ನು ಕೂಡಾ ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ..!!