ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ (ಕುಷ್ಟಗಿ) : ಜಿಲ್ಲೆಯ ಕುಷ್ಟಗಿ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಾಂಕ 18-08-2022 ರಂದು 2022-23ನೇ ಸಾಲಿನ ಎಸ್.ಪಿ.ಸಿ. ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಿಸಲಾಗಿತು..!
ಸರಳ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ನಾಗಪ್ಪ ಬಿಳಿಯಪ್ಪನವರ ಮಾತನಾಡಿ,
ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ಧೇಶದಿಂದ ಶಾಲೆಯ ಉಳಿಕೆ ಹಣದಲ್ಲಿ ಒಟ್ಟು 44 ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ವಿತರಿಸಲಾಗಿದೆ ಎಂದು ಹೇಳಿದರು.
ಶಿಕ್ಷಕರಾದ ಡಾ. ಶರಣಪ್ಪ ನಿಡಶೇಸಿ, ಅಕ್ಕಮಹಾದೇವಿ ಜರಕುಂಟಿ, ಶರಣಪ್ಪ ಚೊಳಚಗುಡ್ಡ, ರೇವಣಸಿದ್ದಪ್ಪ ಅಂಗಡಿ, ಪರುತಗೌಡ, ನಾಗರತ್ನ ಕುಲಕರ್ಣಿ, ಅಯ್ಯವ್ವ ಯರಗೊಪ್ಪ, , ಪ್ರಥಮದರ್ಜೆ ಸಹಾಯಕ ಮಾರುತಿ, ಹುಸೇನಸಾಬ್ ಕೊಳೂರ, ವಿಜಯಲಕ್ಷ್ಮಿ ತುಂಬದ, ನಾಗರಾಜ ಎಲಿಗಾರ, ಸುನಂದಾ ಗುಡದಣ್ಣವರ, ಬಿ.ಕೆ. ವಾರದ, ಸುಭಾಸ ನಿಡಸನೂರ, ಸುಮಾ ತಳವಾರ, ಚೈತ್ರಾ ಹಿರೇಮಠ, ಕಸ್ತೂರಿ ಪಾಟೀಲ್, ಈರಮ್ಮ, ಪ್ರದೀಪ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು..!!