ಶರಣಪ್ಪ ಕುಂಬಾರ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ವಾಯು ಮಾಲಿನ್ಯ ನಿಯಂತ್ರಣ ಎಲ್ಲರ ಜವಾಬ್ದಾರಿ ಆಗಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ ಅವರು ಸಲಹೆ ನೀಡಿದರು..!
ಅವರು ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡರಗಲ್ ಗ್ರಾಮದ ಹೊರವಲಯದಲ್ಲಿ ಮಾಲಿನ್ಯ ಇಲಾಖೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಂಡರಗಲ್ ಗ್ರಾಮದ ಜಮೀನಿನಲ್ಲಿ ಗ್ರಾನೈಟ್ ಉದ್ಯಮಿ ಶೇನಿಕ್ ಕುಮಾರ ಅವರು ಮುಂಬರುವ ದಿನಗಳಲ್ಲಿ ಕೈಗೊಳ್ಳುವ ಪಿಂಕ್ ಗ್ರಾನೈಟ್ ಉದ್ಯಮಕ್ಕೆ ಸಾರ್ವಜನಿಕರಿಂದ ಇರಬಹುದಾದ ಅಹವಾಲುಗಳ ಕುರಿತು ಸಾರ್ವಜನಿಕವಾಗಿ ಚರ್ಚಿಸಲಾಗಿತು. ಕುಷ್ಟಗಿ ತಹಸೀಲ್ದಾರ ಗುರುರಾಜ ಚಲುವಾದಿ, ಪರಿಸರ ಇಲಾಖೆ ಹಿರಿಯ ಅಧಿಕಾರಿ ಸುರೇಶ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ ಹಾಗೂ ಗ್ರಾಮ ಲೆಕ್ಕಾಧಿಕಾರಿ ವೇಲಪ್ಪನ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಬಂಡರಗಲ್ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..!!